October 15, 2026
Thursday, October 15, 2026
spot_img

ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್‌ ದರ ಏರಿಕೆ, ಯಾವ ವಾಹನಕ್ಕೆ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಣಕಾಸು ವರ್ಷದ ಮೊದಲ ದಿನದಿಂದಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ ದರ ಏರಿಕೆಯಾಗಿದೆ.

ಈಗಾಗಲೇ ಪೆಟ್ರೋಲ್‌, ಡಿಸೇಲ್‌ ಹಾಗೂ ವಾಹನಗಳ ಬೆಲೆ ಹೆಚ್ಚಾಗಿದ್ದು, ಇದೀಗ ಟೋಲ್‌ ದರ ಕೂಡ ಹೆಚ್ಚಾಗಿರುವುದು ಜನರನ್ನು ಸಂಕಷ್ಟಕ್ಕೀಡುಮಾಡಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ‌ನಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಹಾಗೂ ರಾಮನಗರದ ಗಣಮಿಣಕಿ ಬಳಿ ಸೇರಿ ಎರಡು ಟೋಲ್ ಪ್ಲಾಜಾಗಳಿದ್ದು , ಈ 2 ಟೋಲ್‌ಗಳಲ್ಲೂ ದರವನ್ನು ಒಂದೇ ಮಾದರಿಯಲ್ಲಿ ಏರಿಕೆ ಮಾಡಲಾಗಿದೆ.

ಪ್ರತಿ ಟೋಲ್‌ನಲ್ಲಿ 5 ರೂ. ನಿಂದ 25 ರೂ. ವರೆಗೆ ಏರಿಕೆಯಾಗಿದೆ. 118 ಕಿಮೀ ಇರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ‌ನಲ್ಲಿ ಕಾರಿನಲ್ಲಿ ಪ್ರಯಾಣ ಮಾಡಿದರೆ ಪ್ರತಿ ಟೋಲ್‌ನಲ್ಲಿ 5 ರೂ. ಎಂಬಂತೆ ಎರಡು ಟೋಲ್‌ಗಳಿಂದ 10 ರೂಪಾಯಿ ಏರಿಕೆಯಾಗಿದೆ.

ಯಾವ ವಾಹನಕ್ಕೆ ಎಷ್ಟು ರೂ. ಹೆಚ್ಚಳ?
ಕಾರು, ವ್ಯಾನ್, ಜೀಪ್
ಹಿಂದಿನ ದರ: 170 ರೂ.
ಹೊಸ ದರ: 175 ರೂ.
ಏರಿಕೆ: 5 ರೂ.

ಲಘು ವಾಹನ / ಮಿನಿ ಬಸ್
ಹಿಂದಿನ ದರ: 275 ರೂ.
ಹೊಸ ದರ: 280 ರೂ.
ಏರಿಕೆ: 5 ರೂ.

ಟ್ರಕ್, ಬಸ್, 2 ಆಕ್ಸ್‌ಲ್ ವಾಹನ
ಹಿಂದಿನ ದರ: 570 ರೂ.
ಹೊಸ ದರ: 585 ರೂ.
ಏರಿಕೆ: 15 ರೂ.

Must Read