Sunday, December 10, 2023

Latest Posts

CINE| ಪ್ರಭಾಸ್ ಇನ್ಸ್ಟಾಗ್ರಾಂ ಅಕೌಂಟ್ ಮಿಸ್ಸಿಂಗ್: ಡಿಲೀಟ್ ಆಯ್ತಾ ಅಥವಾ ಹ್ಯಾಕ್ ಆಯ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾ ಬಿಟ್ಟರೆ ಹೊರಗಡೆ ಹೆಚ್ಚು ಕಾಣಿಸುವುದಿಲ್ಲ. ಇತರ ಹೀರೋಗಳಂತೆ ಸೋಷಿಯಲ್ ಮೀಡಿಯಾದಲ್ಲೂ ಕಾಣೋದು ಅಷ್ಟಕ್ಕಷ್ಟೇ. Instagram ಖಾತೆ ಬಳಸುವ ಪ್ರಭಾಸ್‌,  ಆ ಪ್ಲಾಟ್‌ಫಾರ್ಮ್‌ನಲ್ಲಿಯೂ ತಮ್ಮ ಸಿನಿಮಾ ಅಥವಾ ಇತರ ಸ್ಟಾರ್‌ಗಳ ಸಿನಿಮಾಗಳಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹೊರತುಪಡಿಸಿ ಬೇರೇನನ್ನೂ ಪೋಸ್ಟ್ ಮಾಡುವುದಿಲ್ಲ. ಆದರೆ ಈಗ ಆ ಇನ್‌ಸ್ಟಾಗ್ರಾಮ್ ಕೂಡ ಇಲ್ಲವಾಗಿದೆ.

ಪ್ರಸ್ತುತ ಪ್ರಭಾಸ್ ಇನ್‌ಸ್ಟಾಗ್ರಾಂ ಖಾತೆ ಕಾಣಿಸುತ್ತಿಲ್ಲ. ಆ ಖಾತೆಯನ್ನು ಡಿಲೀಟ್‌ ಮಾಡಲಾಗಿದ್ಯಾ? ಅಥವಾ ಹ್ಯಾಕ್ ಮಾಡಲಾಗಿದ್ಯಾ ಎಂದು ಅಭಿಮಾನಿಗಳು ಹುಡುಕುತ್ತಿದ್ದಾರೆ.

ಈ ಹಿಂದೆ ಪ್ರಭಾಸ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವುದು ಗೊತ್ತೇ ಇದೆ. ಈಗ ಅಭಿಮಾನಿಗಳು Instagram ಮಿಸ್ ಕಾಣದಿರುವುದಕ್ಕೆ ನಿರಾಶೆಗೊಂಡಿದ್ದಾರೆ. ಈ ಖಾತೆ ಏನಾಯಿತು ಎಂಬುದು ಪ್ರಭಾಸ್ ಹೇಳಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!