October 15, 2026
Thursday, October 15, 2026
spot_img

Tomato Bajji | ಸಂಜೆಯ ಟೀ ಜೊತೆ ಸೂಪರ್ ಕಾಂಬಿನೇಷನ್: ಮನೆಯಲ್ಲೇ ಮಾಡಿ ಕ್ರಿಸ್ಪಿ ಟೊಮೆಟೊ ಬಜ್ಜಿ

ಮಳೆಗಾಲದ ಸಂಜೆಯಲ್ಲಿ ಬಿಸಿ ಬಿಸಿ ಬಜ್ಜಿ ಸವಿಯುವುದಕ್ಕೆ ತನ್ನದೇ ಆದ ಮಜಾ ಇದೆ. ಸಾಮಾನ್ಯವಾಗಿ ಮೆಣಸಿನಕಾಯಿ ಅಥವಾ ಈರುಳ್ಳಿ ಬಜ್ಜಿಯ ಬದಲು ಒಮ್ಮೆ ಟೊಮೆಟೊ ಬಜ್ಜಿ ಮಾಡಿ ನೋಡಿ. ಹೊರಗೆ ಗರಿಗರಿಯಾಗಿದ್ದು, ಒಳಗೆ ಮೃದುವಾದ ಟೊಮೆಟೊ ರುಚಿ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ಮಧ್ಯಮ ಗಾತ್ರದ ಟೊಮೆಟೊ – 4 ರಿಂದ 5
ಕಡಲೆ ಹಿಟ್ಟು (ಬೆಸನ್) – 1½ ಕಪ್
ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್
ಓಮ (ಅಜ್ವೈನ್) – ½ ಟೀ ಸ್ಪೂನ್
ಖಾರದ ಪುಡಿ – 1 ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಚಿಟಿಕೆ ಅಡುಗೆ ಸೋಡಾ
ಎಣ್ಣೆ – ಕರಿಯಲು ಬೇಕಾದಷ್ಟು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಓಮ, ಅರಿಶಿನ, ಉಪ್ಪು ಮತ್ತು ಬೇಕಿದ್ದರೆ ಚಿಟಿಕೆ ಅಡುಗೆ ಸೋಡಾ ಹಾಕಿ ನೀರು ಸೇರಿಸಿ ದಪ್ಪದ ಬಜ್ಜಿ ಹಿಟ್ಟನ್ನು ತಯಾರಿಸಿಕೊಳ್ಳಿ.

ನಂತರ ಟೊಮೆಟೊಗಳನ್ನು ಚೆನ್ನಾಗಿ ತೊಳೆದು ದಪ್ಪದ ವೃತ್ತಾಕಾರದ ಹೋಳುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಕಾಯಿಸಿದ ಬಳಿಕ, ಟೊಮೆಟೊ ಹೋಳುಗಳನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.

Must Read