VIRAL VIDEO| ಟೊಮ್ಯಾಟೋಗೆ ಕಾವಲುಗಾರನಾಗಿ ಬುಸ್‌ ಬುಸ್‌ ನಾಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಒಂದು ಕಿಲೋ ಟೊಮ್ಯಾಟೋ 100 ರಿಂದ 200 ರೂಪಾಯಿ ವರೆಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೊ ರಕ್ಷಣೆಗೆ ಬೌನ್ಸರ್‌ಗಳ ನೇಮಕ ಮಾಡಿಕೊಂಡ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ನಾಗರಹಾವೊಂದು ಟೊಮ್ಯಾಟೋಗೆ ಕಾವಲಿರುವ ವಿಡಿಯೋ ವೈರಲ್‌ ಆಗುತ್ತಿದೆ. ಮಿರ್ಜಾ ಎಂಡಿ ಆರಿಫ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಟೊಮ್ಯಾಟೋ ಇದ್ದ ಮನೆಗೆ ನಾಗರಹಾವು ನುಗ್ಗಿದ್ದು, `ನಿಧಿಗಿಂತ ಹೆಚ್ಚಿನ ಮೌಲ್ಯದ ಟೊಮ್ಯಾಟೋಗಳನ್ನು ರಕ್ಷಿಸುವ ಹಾವುʼ ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇದಕ್ಕೆ ವಿಧ ವಿಧವಾದ ಕಮೆಂಟ್‌ಗಳು ಹರಿದುಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!