KITCHEN TIPS| ಚುಮುಚುಮು ಚಳಿಗೆ ಟೊಮೆಟೊ ಪೆಪ್ಪರ್ ಸೂಪ್ ರೆಸಿಪಿ ತಯಾರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು:

ಟೊಮ್ಯಾಟೊ – ಮೂರು
ಕಾಳುಮೆಣಸಿನ ಪುಡಿ – ಒಂದು ಚಮಚ
ಬೆಳ್ಳುಳ್ಳಿ ಎಸಳು – ನಾಲ್ಕೈದು
ಶುಂಠಿ ತುಂಡು – ಚಿಕ್ಕದು
ದಾಲ್ಚಿನ್ನಿ – ಚಿಕ್ಕದು
ಈರುಳ್ಳಿ – ಒಂದು
ಎಣ್ಣೆ – ಒಂದು ಚಮಚ
ಮೆಂತ್ಯ – ಸ್ವಲ್ಪ, ಉಪ್ಪು: ರುಚಿಗೆ

ಮಾಡುವ ವಿಧಾನ: 

ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಸುರಿದು ಟೊಮೆಟೊ, ಶುಂಠಿ, ದಾಲ್ಚಿನ್ನಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಕುದಿಸಿ. ಮಿಶ್ರಣವು ತಣ್ಣಗಾದ ನಂತರ ಎಲ್ಲವನ್ನು ಮ್ಯಾಶ್ ಮಾಡಿ. ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿ ಮಾಡಿ, ಬೆಳ್ಳುಳ್ಳಿ ಎಸಳು ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಟೊಮೆಟೊ ಮಿಶ್ರಣವನ್ನು ಸೇರಿಸಿ ಬೇಕಾದಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಕುದಿಸಿ. ಮೇಲೆ ಕಾಳುಮೆಣಸಿನ ಪುಡಿಯನ್ನು ಉದುರಿಸಿ ಪುದೀನಾ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!