ಚಪ್ಪರಿಸಿ ತಿನ್ನುವ ಟೊಮ್ಯಾಟೊ ಉಪ್ಪಿನಕಾಯಿ ರೆಸಿಪಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು. ಇಲ್ಲದಿದ್ರೆ ಅದು ಕಂಪ್ಲೀಟ್‌ ಆಗಲ್ಲ. ಇತ್ತಿಚೆಗಂತೂ ಎಲ್ಲಾ ತರಕಾರಿಗಳ ಉಪಿನಕಾಯಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದು ಮನೆಯಲ್ಲೇ ಸಿಂಪಲ್‌ ಆಗಿ ಮಾಡಿ ಟೊಮ್ಯಾಟೊ ಉಪ್ಪಿನಕಾಯಿ. ಅನ್ನ, ಚಪಾತಿ ರೊಟ್ಟಿ ಎಲ್ಲದಕ್ಕೂ ಸರಿದೂಗುವ ರೆಸಿಪಿ.

ಬೇಕಾಗುವ ಪದಾರ್ಥಗಳು
1 ಕೆಜಿ ಟೊಮೆಟೊ
50 ಗ್ರಾಂ ಹುಣಿಸೇಹಣ್ಣು (ಬೀಜವಿಲ್ಲದ)
4 ಟೇಬಲ್ಸ್ಪೂನ್ ಮೆಣಸಿನ ಪುಡಿ
2 ಟೇಬಲ್ಸ್ಪೂನ್ ಉಪ್ಪು
3/4 ಕಪ್ ಎಣ್ಣೆ
1 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡಲೆ ಬೇಳೆ
1/2 ಟೀಸ್ಪೂನ್ ಜೀರಿಗೆ
ಚಿಟಿಕೆ ಇಂಗು
10 ಬೆಳ್ಳುಳ್ಳಿ (ಪುಡಿಮಾಡಿದ)
4 ಒಣ ಮೆಣಸಿನಕಾಯಿ
ಕರಿಬೇವು

ಮಾಡುವ ವಿಧಾನ

ದೊಡ್ಡ ಪಾತ್ರೆಯಲ್ಲಿ ಒಂದು ಕೆಜಿ ಟೊಮ್ಯಾಟೊ ಬೇಯುವಷ್ಟು ನೀರಿಡಿ. ನೀರು ಕುದಿ ಬಂದ ಮೇಲೆ 1 ಕೆಜಿ ಹಣ್ಣಾದ ಟೊಮ್ಯಾಟೊ ಹಾಕಿ ಬೇಯಿಸಿ. ಸಿಪ್ಪೆ ಬಿಡುವವರೆಗೆ ಬೇಯಿಸಿದ ಬಳಿಕ ಟೊಮ್ಯಾಟೊ ಆಚೆ ತೆಗೆದು ತಣ್ಣಗಾದ ಬಳಿಕ ಸಿಪ್ಪೆ ತೆಗೆದು ಅರ್ಧಂಬರ್ಧ ಕತ್ತರಿಸಿ. ಅದನ್ನು ಒಂದು ಬಾಣಲೆಗೆ ಹಾಕಿ 50 ಗ್ರಾಂ ಹುಣಿಸೇಹಣ್ಣು ಸೇರಿಸಿ ಟೊಮೆಟೊದ ಹುಳಿ ಆಧಾರದ ಮೇಲೆ ಹುಣಿಸೇಹಣ್ಣಿನ ಪ್ರಮಾಣವನ್ನು ಸರಿಹೊಂದಿಸಿ. ಮಿಶ್ರಣ ಮೆತ್ತಗಾದ ಬಳಿಕ ಒಂದು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ 4 ಟೇಬಲ್ಸ್ಪೂನ್ ಮೆಣಸಿನ ಪುಡಿ ಮತ್ತು 2 ಟೇಬಲ್ಸ್ಪೂನ್ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ.

ಪ್ಯಾನ್ ನಲ್ಲಿ, 3/4 ಕಪ್ ಎಣ್ಣೆ ಬಿಸಿ ಮಾಡಿ. 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಟೀಸ್ಪೂನ್ ಕಡಲೆ ಬೇಳೆ, 1/2 ಟೀಸ್ಪೂನ್ ಜೀರಿಗೆ ಮತ್ತು ಚಿಟಿಕೆ ಇಂಗು, 10 ಬೆಳ್ಳುಳ್ಳಿ, 4 ಒಣ ಮೆಣಸಿನಕಾಯಿ ಕರಿಬೇವು ಹಾಕಿ ಕರಿಯಿರಿ. ಎಲ್ಲವೂ ಸ್ವಲ್ಪ ಕಂದುಬಣ್ಣಕ್ಕೆ ತಿರುಗಿದ ಮೇಲೆ ರುಬ್ಬಿದ ಪೇಸ್ಟ್‌ ಹಾಕಿ ಎಣ್ಣೆ ತೇಲುವವರೆಗೆ ಕುಸಿದಿ, ತಣ್ಣಗಾದ ಬಳಿಕ ಗಾಳಿಯಾಡದ ಡಬ್ಬಿಗೆ ಹಾಕಿ ಊಟದ ಜೊತೆ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!