ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ತುಲಾಭಾರ ಸೇವೆ ಮಾಡೋದಾದರೆ ಬೆಲ್ಲ, ಸಕ್ಕರೆ ಅಥವಾ ನಾಣ್ಯಗಳಿಂದ ತೂಕ ಮಾಡವುದು ರೂಢಿ. ಇದೀಗ ಟೊಮ್ಯಾಟೋ ಬೆಲೆ ಹೆಚ್ಚಾದದ್ದರಿಂದ ಇದಕ್ಕೆ ರಾಜ ಮರ್ಯಾದೆ ಸಿಗುತ್ತಿದೆ ಅಂದರೆ ತಪ್ಪೇನಿಲ್ಲ. ಹಾಗೆಯೇ ಇಲ್ಲೊಬ್ಬ ತಂದೆ ಮಗಳ ಮೇಲಿನ ಪ್ರೀತಿಯಿಂದ ಟೊಮ್ಯಾಟೋ ತುಲಾಭಾರ ಮಾಡಿಸಿದ್ದಾರೆ.
ಭವಿಷ್ಯಾ ಅನಕಾಪಲ್ಲಿ ಪಟ್ಟಣದ ಮಲ್ಲ ಜಗ್ಗ ಅಪ್ಪರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ. ಅಪ್ಪಾರಾವ್ ಅವರ ಕುಟುಂಬಸ್ಥರು ಭಾನುವಾರ ಅನಕಾಪಲ್ಲಿ ಜಿಲ್ಲಾ ಕೇಂದ್ರದ ನೂಕಾಲಮ್ಮ ದೇವಸ್ಥಾನಕ್ಕೆ ಬಂದು ತಮ್ಮ ಸೇವೆಯನ್ನು ಪೂರೈಸಿದರು. ತಮ್ಮ ಕೋರಿಕೆ ಈಡೇರಿದ್ದರಿಂದ ಹೊತ್ತಿದ್ದ ಹರಕೆ ನೆರವೇರಿಸಿದರು.
ನೂಕಾಳಮ್ಮಗೆ ಅಪ್ಪಾರಾವ್ 51 ಕೆಜಿ ಟೊಮ್ಯಾಟೊ ಸಮರ್ಪಿಸಿದರು. ಅಮ್ಮಾವಾರಿಯ ನಿತ್ಯಾನ್ನದಾನದಲ್ಲಿ ಬಳಸಲಾಗುವುದು ಎಂದು ನೂಕಾಲಮ್ಮ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ರೂ. 120-150 ಇದ್ದುದರಿಂದ ತುಲಾಭಾರದಲ್ಲಿ ದರ್ಶನಕ್ಕೆ ಬಂದ ಭಕ್ತರು ಆಸಕ್ತಿಯಿಂದ ವೀಕ್ಷಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಕುತೂಹಲ ಮೂಡಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಟೊಮ್ಯಾಟೊ ಮೇಲೆ ಜೋಕ್, ಮೀಮ್ಸ್, ಕಳ್ಳತನಕ್ಕೆ ಸಂಬಂಧಿಸಿದ ಸುದ್ದಿಗಳು ವೈರಲ್ ಆಗುತ್ತಿವೆ.