ಹೊಸದಿಗಂತ ವರದಿ,ಅಂಕೋಲಾ :
ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಎದ್ದ ಅಲೆಗೆ ಮನೆ ಮಠ ಕಳೆದುಕೊಂಡ ಉಳುವರೆ ಗ್ರಾಮಕ್ಕೆ ರಾಜ್ಯಸಭಾ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿ ಪರಿಶೀಲನೆ ನಡೆಸಲಿದ್ದಾರೆ ಮತ್ತು ಸಂತ್ರಸ್ತರನ್ನು ಭೇಟಿಯಾಗಿ ಅವರ ನೋವು ಆಲಿಸಲಿದ್ದಾರೆ.
ಡಾ. ಹೆಗ್ಗಡೆಯವರು ನೇರವಾಗಿ ಧರ್ಮಸ್ಥಳದಿಂದ ಉಳುವರೆಗೆ ಬರುತ್ತಿದ್ದಾರೆ.
ಉಳುವರೆಯಲ್ಲಿ ಹಾಲಕ್ಕಿ ಒಕ್ಕಲಿಗರು ಮತ್ತು ಅಂಬಿಗ ಸಮುದಾಯದ 48 ಮನೆಗಳಿದ್ದು ಗಂಗಾವಳಿ ನದಿಯ ಅಬ್ಬರಕ್ಕೆ ಆರು ಮನೆಗಳೂ ಪೂರ್ಣ ಕೊಚ್ಚಿಹೋಗಿ ಓರ್ವ ವೃದ್ದೆ ಸಣ್ಣಿ ಗೌಡ ಸಾವನ್ನಪ್ಪಿದ್ದಾಳೆ. ಉಳಿದ ಎಲ್ಲ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ