ಹೊಸದಿಗಂತ ವರದಿ,ಕಲಬುರಗಿ:
ರಸ್ತೆಯ ಮೇಲೆ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟಿ ಯ ಬ್ಯಾಟರಿ ಸ್ಪೋಟಗೊಂಡು ಸ್ಕೂಟಿ ಹೊತ್ತೂರಿದ ಘಟನೆ ನಗರದ ಫಿಲ್ಟರ್ ಬೆಡ್ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ರೋಹಿತ್ ಚೌಹಾಣ್ ಎಂಬುವವರಿಗೆ ಸೇರಿದ ಸ್ಕೂಟಿ ಇದಾಗಿದ್ದು, ಸ್ಕೂಟಿ ಮೇಲೆ ಸಂಚರಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬ್ಯಾಟರಿ ಸ್ಪೋಟಗೊಂಡ ಶಬ್ದ ಕೇಳಿದ ತಕ್ಷಣವೇ ರೋಹಿತ್ ಸ್ಕೂಟಿ ಯಿಂದ ಕೆಳಗೆ ಇಳಿದಿದ್ದಾನೆ.
ಸ್ಟೋಟಗೊಂಡ ಕ್ಷಣಾರ್ಧದಲ್ಲಿ ಎಲೆಕ್ಟ್ರಿಕ್ ಬೈಕ್ ಧಗ ಧಗನೆ ಊರಿದು ಹೋಗಿದ್ದು,ಈ ಕುರಿತು ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.