ಮೇಷ
ಕೆಲದಿನಗಳ ಒತ್ತಡ ನಿವಾರಣೆ. ನಿಮಗೆ ಅನುಕೂಲಕರ ಬೆಳವಣಿಗೆ. ಮನಸ್ಸಿಗೆ ನಿರಾಳತೆ. ಆಪ್ತರ ಜತೆಗಿನ ಮಾತುಕತೆ ಮನಸ್ತಾಪ ನಿವಾರಿಸಲಿದೆ.
ವೃಷಭ
ಆರ್ಥಿಕ ಪ್ರಗತಿ ಉತ್ತಮ. ಆದರೆ ಆಪ್ತರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಸ್ನೇಹಿತನೇ ನಿಮ್ಮ ವಿರೋಧಿಯಾಗಿ ಬದಲಾಗಬಹುದು.
ಮಿಥುನ
ನಿಮ್ಮ ನಡೆ ಕೆಲವರಿಗೆ ತಪ್ಪರ್ಥ ಮೂಡಿಸಬಹುದು. ಅಸಮಾಧಾನ ತರುವ ಬೆಳವಣಿಗೆ. ನಿಮ್ಮ ನಿಲುವು ಸಡಿಲಿಸಬೇಡಿ.
ಕಟಕ
ಮನಸ್ಸಿಗೆ ನಿರಾಳತೆ ತರುವಂತಹ ಬೆಳವಣಿಗೆ. ಕಾರ್ಯ ಸಾಫಲ್ಯ, ವಿರಸ ಮುಕ್ತಿ. ಅನಿರೀಕ್ಷಿತ ಖರ್ಚು ಬಂದೀತು. ಆತ್ಮೀಯ ಬಂಧು ಭೇಟಿ.
ಸಿಂಹ
ಈ ದಿನ ಪ್ರಗತಿ ಸಾಧಿಸಿದರೂ ನಿಮಗೆ ಮಾತ್ರ ತೃಪ್ತಿಯಿಲ್ಲ. ನಿಮ್ಮ ಮನಸ್ಸು ಬೇರೇನನ್ನೋ ಬಯಸುತ್ತದೆ. ಮನೆಯಲ್ಲಿ ಕಲಹವಾದೀತು.
ಕನ್ಯಾ
ನಿಮ್ಮ ಪಾಲಿಗೆ ಮಹತ್ವದ ದಿನ.ಬಯಸಿದ ಬೆಳವಣಿಗೆ ಸಂಭವ. ದೊಡ್ಡ ಸಮಸ್ಯೆಯೊಂದು ನಿವಾರಣೆ, ಕೆಲಸ ಸುಲಲಿತ. ಧನಪ್ರಾಪ್ತಿ.
ತುಲಾ
ಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಾಗುವ ಸನ್ನಿವೇಶ ಉಂಟಾದೀತು. ದುಡುಕಿನ ನಿರ್ಧಾರ ತಾಳದಿರಿ. ಎಲ್ಲರ ಜತೆ ಸೌಹಾರ್ದತೆ ಇರಲಿ.
ವೃಶ್ಚಿಕ
ಕೆಲಸದಲ್ಲಿ ಅಧಿಕ ಒತ್ತಡ. ತಾಳ್ಮೆಯ ವರ್ತನೆ ಅಗತ್ಯ. ಇತರರ ಪ್ರಲೋಭನೆಗೆ ಒಳಗಾಗಿ ವರ್ತಿಸಬೇಡಿ. ಅಲರ್ಜಿ ಕಾಡಬಹುದು.
ಧನು
ಅನ್ಯರ ಮೆಚ್ಚಿಸಲು ಅನವಶ್ಯ ಪ್ರಯತ್ನ ಬೇಡ. ನಿಮ್ಮ ಕಾರ್ಯ ನಿಷ್ಠೆಯಿಂದ ಮಾಡಿ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ ಕಷ್ಟವಾದೀತು.
ಮಕರ
ನಿಮ್ಮ ನಿರ್ಧಾರ ಬೇರೆಯವರ ಮೇಲೆ ಹೇರಬೇಡಿ. ಅದು ವಿರಸಕ್ಕೆ ಹೇತುವಾದೀತು. ಕೌಟುಂಬಿಕ ಶಾಂತಿಗೆ ಭಂಗ. ಆರ್ಥಿಕ ಕೊರತೆ.
ಕುಂಭ
ನಡೆನುಡಿಯಲ್ಲಿ ಎಚ್ಚರ ವಹಿಸಿ. ಜಗಳಕ್ಕೆ ಆಸ್ಪದ ಕೊಡಬೇಡಿ. ಗೌರವಕ್ಕೆ ಕುಂದು ತರುವ ಬೆಳವಣಿಗೆ ಸಂಭವಿಸಬಹುದು..
ಮೀನ
ಜೀವನದ ಹೊಸ ಪಾಠ ಕಲಿಯುವಂತಹ ಪ್ರಸಂಗ ಸಂಭವ. ಬಿಕ್ಕಟ್ಟು ಎದುರಾದರೂ ಬಳಿಕ ಪರಿಹಾರ ಕಂಡು ನೆಮ್ಮದಿ ಉಂಟಾಗಲಿದೆ.



