ಸ್ತ್ರೀವಾದ ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ: ಬಾಲಿವುಡ್ ನಟಿ ನೋರಾ ಫತೇಹಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ತಮಗೆ ಸ್ತ್ರೀವಾದದ ಮೇಲೆ ನಂಬಿಕೆ ಇಲ್ಲ. ಗಂಡು, ಹೆಣ್ಣು ಎಲ್ಲರೂ ಇಲ್ಲಿ ಸರಿಸಮಾನರು ಎಂದು ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಹೇಳಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟಿಯರು ಹಣಕ್ಕಾಗಿ ಶ್ರೀಮಂತರನ್ನು ಮದುವೆ ಆಗುತ್ತಿದ್ದಾರೆ. ಯಾರೂ ಪತಿಯ ಜೊತೆ ಸುಖವಾಗಿ ಇಲ್ಲ ಎಂದು ಹೇಳುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದರು.

ಸ್ತ್ರೀವಾದದ ಮೇಲೆ ನನಗೆ ನಂಬಿಕೆ ಇಲ್ಲ ಎಂದಿರುವ ನಟಿ, ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಮಹಿಳೆಯರು ಸಂಸ್ಕಾರವಂತರಾಗಿದ್ದು, ತಾಯಂದಿರ ಪಾತ್ರವನ್ನು ವಹಿಸಿಕೊಳ್ಳಬೇಕು. ಆದರೆ ಇಂದು ಸ್ತ್ರೀವಾದವು ಹೆಚ್ಚಾಗಿದೆ. ಇದರಲ್ಲಿ ನನಗೆ ನಂಬಿಕೆ ಇಲ್ಲ. ಸಮಾಜದ ಮೇಲೆ ಸ್ತ್ರೀವಾದದ ಮೈಂಡ್ ವಾಶ್ ಜಾಸ್ತಿಯಾಗುತ್ತಿದೆ ಎಂದಿದ್ದಾರೆ.

ಮಹಿಳೆಯೊಬ್ಬರು ತಾಯಿ, ಹೆಂಡತಿ ಮತ್ತು ಪೋಷಕ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಒಬ್ಬ ಪುರುಷ ಮಾಡುವ ಎಲ್ಲಾ ಕೆಲಸ ಮಹಿಳೆಯರಿಂದಲೂ ಸಾಧ್ಯ, ಎಲ್ಲದ್ದಕ್ಕೂ ಆಕೆ ಸಿದ್ಧರಾಗಿರಬೇಕು. ನಾವು ಇದನ್ನು ಹಳೆಯ-ಶಾಲೆ, ಸಾಂಪ್ರದಾಯಿಕ ಚಿಂತನೆಯ ವಿಧಾನ ಎಂದು ಕರೆಯುತ್ತೇವೆ. ನಾನು ಅದನ್ನು ಸಾಮಾನ್ಯ ಚಿಂತನೆಯ ಮಾರ್ಗ ಎಂದು ಕರೆಯುತ್ತೇನೆ. ಮಹಿಳೆ ಸ್ವಾಭಾವಿಕವಾಗಿ ಸಂಪೂರ್ಣವಾಗಿ ಸ್ವತಂತ್ರಳು. ಆಕೆಗೆ ಹುಟ್ಟುತ್ತಲೇ ಅಮೋಘ ಶಕ್ತಿ ಇರುತ್ತದೆ. ಆದ್ದರಿಂದ ಮಹಿಳೆ ಕೆಲಸಕ್ಕೆ ಹೋಗಬೇಕು ಮತ್ತು ತಮ್ಮದೇ ಆದ ಜೀವನವನ್ನು ಹೊಂದಿರಬೇಕು ಮತ್ತು ಸ್ವತಂತ್ರವಾಗಿರಬೇಕು ಎಂದು ನಟಿ ಹೇಳಿದ್ದಾರೆ.

ನಾನು ಮಹಿಳೆಯರ ಹಕ್ಕುಗಳಿಗಾಗಿ ಸಹ ಪ್ರತಿಪಾದಿಸುತ್ತೇನೆ. ಹುಡುಗಿಯರು ಶಾಲೆಗೆ ಹೋಗಬೇಕು. ಭಾವನಾತ್ಮಕ ವಿಷಯಗಳಲ್ಲಿ ಮಹಿಳೆ ಪುರುಷರು ಸಮಾನರು. ಆದರೆ ಸಾಮಾಜಿಕ ವಿಷಯಗಳಲ್ಲಿ ಮಹಿಳೆ ಸಮಾನರಲ್ಲ. ಸ್ತ್ರೀವಾದವು ಅಂತರ್ಗತವಾಗಿ, ತಳಮಟ್ಟದಲ್ಲಿ ಉತ್ತಮವಾಗಿದೆ. ಮಹಿಳೆಯರು ಸಮಾಜದಲ್ಲಿ ರಕ್ಷಣಾತ್ಮಕ ಪಾತ್ರವನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಹೆಚ್ಚಿನ ಪುರುಷರು ಇದನ್ನೆಲ್ಲಾ ಇನ್ನು ಮುಂದೆ ಮಾಡಲು ಬಯಸುವುದಿಲ್ಲ. ಬಹಳಷ್ಟು ಪುರುಷರು ಈಗ ಸ್ತ್ರೀವಾದದ ಯುಗದಿಂದ ಬ್ರೈನ್‌ವಾಶ್‌ಗೆ ಒಳಗಾಗಿದ್ದಾರೆ ಎಂದು ನೋರಾ ಹೇಳಿದ್ದಾರೆ.

ಕೆಲವರು ನೋರಾ ಮಾತನ್ನು ನೂರಕ್ಕೆ ನೂರರಷ್ಟು ಒಪ್ಪಿದರೆ, ಇನ್ನೂ ಕೆಲವರು ಅದಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!