ಯಾಕೆ ಮತ್ತೆ ಮೋದಿ ಪ್ರಧಾನಿ ಆಗಬೇಕು?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ? ಎಂದು ಹುಣಸೂರಿನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದೇಶದ ಜನರಿಗೆ ಬರೀ ಭ್ರಮೆ ಹುಟ್ಟಿಸಿದ್ದಾರೆ ಅಷ್ಟೆ. ದೇಶದ ಜನರಿಗೆ ಬರೀ ಸುಳ್ಳು ಹೇಳಿದ್ದಾರೆ. ಸಂವಿಧಾನ ಬದಲಾವಣೆ ಬಗ್ಗೆ ಮೋದಿ, ಅಮಿತ್ ಶಾ ಇಬ್ಬರು ಬೇರೆಯವರ ಮೂಲಕ ಹೇಳಿಸುತ್ತಾರೆ. ಮೋದಿ, ಅಮಿತ್ ಶಾ ಸಂವಿಧಾನ ಬದಲಾವಣೆ ಬಗ್ಗೆ ಅನಂತಕುಮಾರ್ ಹೆಗಡೆ ಮೂಲಕ ಹೇಳಿಸಿದ್ದಾರೆ ಎಂದು ಸಿಎಂ ಹೇಳಿದರು.

ಬರಗಾಲ ನೋಡೋಕೆ ಪ್ರಧಾನಿ ಬರಲಿಲ್ಲ.‌ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರ್ತಾರೆ. ಪ್ರಧಾನಿ ದೇಶದ ದಾರಿ ತಪ್ಪಿಸುತ್ತಿದ್ದಾರೆ. ಜನರು 10 ವರ್ಷ ಅವರನ್ನು ನೋಡಿದ್ದಾರೆ. ಬಿಜೆಪಿ ವಿರುದ್ಧ ಮತ ಹಾಕುತ್ತಾರೆ. ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮನವಿ ಕೊಟ್ಟಿದ್ದೆವು. ಒಂದು ಪೈಸೆ ದುಡ್ಡು ಕೊಡಲಿಲ್ಲ. ನಿರ್ಮಲಾ ಸೀತಾರಾಮನ್ ನೀತಿ ಸಂಹಿತೆ ಬಂತು ಅಂದ್ರು. ನಾವು ಮನವಿ ಕೊಟ್ಟ ಅನೇಕ ತಿಂಗಳ ಬಳಿಕ ಚುನಾವಣೆ ಬಂತು ಎಂದು ಸಿಎಂ ಸಿದ್ದು ತಿಳಿಸಿದರು.

ಜನಸಾಮಾನ್ಯರ ಒಳಿತಿಗಾಗಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಕಂಡು ಸೋಲುವ ಭೀತಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ನವರು ಮೈತ್ರಿ ಮಾಡಿಕೊಂಡಿದ್ದಾರೆ. ಸೋಲುವ ಭೀತಿಯಿಂದಲೇ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಇರಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳು ಯಾವ ಕಾರಣಕ್ಕೂ ನಿಲ್ಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!