ಇಂಡೋ – ಇಂಗ್ಲೆಂಡ್‌ ಸೆಮೀಸ್‌ ಗಿಲ್ಲ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್:‌ ಅಭಿಮಾನಿಗಳ ಸಂಭ್ರಮಾಚರಣೆ, ನೆಟ್ಟಿಗರಿಂದ ಮೀಮ್‌ ಗಳ ಸುರಿಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2022ರ ಟಿ 20 ವಿಶ್ವಕಪ್‌ ನಿರ್ಣಾಯಕ ಹಂತಕ್ಕೆ ತಲುಪಿವೆ. ಭಾರತ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ ಉಪಾಂತ್ಯ ಕಣದಲ್ಲಿ ಉಳಿದಿರುವ 4 ತಂಡಗಳಾಗಿವೆ. ನವೆಂಬರ್ 11 (ಗುರುವಾರ) ಅಡಿಲೇಡ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಈ ಪಂದ್ಯ ಗೆದ್ದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಈ ಪಂದ್ಯಕ್ಕೆ ಅಂಪೈರ್‌ ಗಳ ಘೋಷಣೆಯಾಗಿದ್ದು, ಈ ಸೆಮಿಫೈನಲ್ ಪಂದ್ಯದಲ್ಲಿ ರಿಚರ್ಡ್ ಅಲನ್ ಕೆಟಲ್‌ಬರೋ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ವಿಚಾರ ಘೋಷಣೆಯಾಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ!.
ಇದಕ್ಕೂ ಕಾರಣವಿದೆ. ಟೀಂ ಇಂಡಿಯಾ 2014 ರಿಂದೀಚೆಗೆ ಸೆಮೀಸ್‌ ಹಾಗೂ ಪೈನಲ್‌ ನಲ್ಲಿ ಸೋತ ಎಲ್ಲಾ ಪಂದ್ಯಗಳಿಗೆ ಕೆಟಲ್‌ಬರೋ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು. 2014ರ ಟಿ 20 ವಿಶ್ವಕಪ್‌, 2015ರ ಏಕದಿನ ವಿಶ್ವಕಪ್‌, 2016 ರ ಟೀ 20 ವಿಶ್ವಕಪ್, 2017ರ ಚಾಂಪಿಯನ್ಸ್‌ ಲೀಗ್‌ ಟ್ರೋಫಿ, 2019 ಏಕದಿನ ವಿಶ್ವಕಪ್‌ ನಲ್ಲಿ ಭಾರತ ಆಡಿದ್ದ ನಾಕೌಟ್‌ ಪಂದ್ಯಗಳಿಗೆ ಕ್ಯಾಟಲ್‌ ರಿಚರ್ಡ್‌ ಬರೋ ಅಂಪೈರ್‌ ಆಗಿದ್ದರು. ಕಾಕತಾಳಿಯವೆಂದರೆ ಭಾರತ ಈ ಎಲ್ಲಾ ಪಂದ್ಯಗಳಲ್ಲಿ ಸೋತಿದೆ!.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈ ಓಲ್ಟೇಜ್ ಘರ್ಷಣೆಗೆ ಕುಮಾರ್ ಧರ್ಮಸೇನಾ ಮತ್ತು ಪಾಲ್ ರೀಫೆಲ್ ಆನ್-ಫೀಲ್ಡ್ ಅಂಪೈರ್‌ಗಳಾಗಿರುತ್ತಾರೆ. ಕ್ರಿಸ್ ಗಫಾನಿ ಮತ್ತು ರಾಡ್ ಟಕರ್ ಅವರು ಮೂರನೇ ಮತ್ತು ನಾಲ್ಕನೇ ಅಂಪೈರ್‌ಗಳ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಡೇವಿಡ್ ಬೂನ್ ಈ ಸ್ಪರ್ಧೆಗೆ ಮ್ಯಾಚ್ ರೆಫರಿಯಾಗಿರುತ್ತಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉಲ್ಲಾಸದ ಮೀಮ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!