ಶಾಖದ ಹೊಡೆತಕ್ಕೆ ವರ್ಷದಲ್ಲಿ ಮೃತಪಟ್ಟವರ ಸಂಖ್ಯೆ 15ಸಾವಿರ: ಡಬ್ಲ್ಯೂಎಚ್‌ಒ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುರೋಪಿನಲ್ಲಿ ಬಿಸಿಲಿನ ತಾಪಮಾನದಿಂದಾಗಿ ಈ ವರ್ಷ 15 ಸಾವಿರ ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಬಹಿರಂಗಪಡಿಸಿದೆ. ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ಸುಮಾರು 4,000 ಜನರು, ಯುಕೆಯಲ್ಲಿ 1,000 ಕ್ಕೂ ಹೆಚ್ಚು, ಬ್ರಿಟನ್‌ನಲ್ಲಿ 3,200 ಮತ್ತು ಜರ್ಮನಿಯಲ್ಲಿ 4,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಯುರೋಪ್‌ನ ಪ್ರಾದೇಶಿಕ ನಿರ್ದೇಶಕ ಡಾ. ಹ್ಯಾನ್ಸ್ ಹೆನ್ರಿ ಕ್ಲೂಗೆ ಹೇಳಿದ್ದಾರೆ.

1961-2021ರ ಅವಧಿಯಲ್ಲಿ ಯುರೋಪ್‌ನಲ್ಲಿ ತಾಪಮಾನವು ಗಣನೀಯವಾಗಿ ಹೆಚ್ಚುತ್ತಿದೆ. ಪ್ರತಿ ದಶಕಕ್ಕೆ ಸರಾಸರಿ 0.5 ಡಿಗ್ರಿಗಳಷ್ಟು ತಾಪಮಾನವು ಹೆಚ್ಚುತ್ತಿದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಈ ವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಯುರೋಪ್ ವೇಗವಾಗಿ ತಾಪಮಾನ ಏರಿಕೆಯಾಗುವ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಹೆನ್ರಿ ಮಾತನಾಡಿ, ಕಳೆದ 50 ವರ್ಷಗಳಲ್ಲಿ 1.48 ಲಕ್ಷ ಜನರು ತೀವ್ರ ತಾಪಮಾನದಿಂದ ಸಾವನ್ನಪ್ಪಿದ್ದರೆ, ಈ ವರ್ಷವೊಂದರಲ್ಲೇ ಕನಿಷ್ಠ 15 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ನೂರಾರು ಸಾವುಗಳು ದಾಖಲಾಗಿದ್ದರೆ ಅದರಲ್ಲಿ 84 ರಷ್ಟು ಪ್ರವಾಹ ಮತ್ತು ಚಂಡಮಾರುತದಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬದಲಾಗುತ್ತಿರುವ ಹವಾಮಾನದ ದೃಷ್ಟಿಯಿಂದ ಭವಿಷ್ಯದ ಬಗ್ಗೆ ಜಾಗರೂಕರಾಗಿರಲು ಇದು ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ (COP27) ಗಾಗಿ ಪ್ರಪಂಚದಾದ್ಯಂತದ ಪ್ರತಿನಿಧಿಗಳು ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ಒಟ್ಟುಗೂಡಿದಾಗ ಈ ಅಂಕಿ ಅಂಶಗಳು ಬೆಳಕಿಗೆ ಬಂದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!