ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಟೈಟಾನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಮತ್ತೆ ನೀರಸ ಪ್ರದರ್ಶನವನ್ನು ಮುಂದುವರಿಸಿದೆ. 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಲು ಬಂದ ಹೈದರಾಬಾದ್ಗೆ ಸಿರಾಜ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್(8) ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಮೊದಲ ಬ್ರೇಕ್ ನೀಡಿದರು. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 14 ಎಸೆತಗಳಲ್ಲಿ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಪವರ್ ಪ್ಲೇನಲ್ಲೇ ಬ್ಯಾಟಿಂಗ್ಗೆ ಬಂದ ನಿತೀಶ್ ಕುಮಾರ್ ನಿಧಾನಗತಿ ಬ್ಯಾಟಿಂಗ್ಗೆ ಮೊರೆ ಹೋದರು. ಅವರು 4ನೇ ವಿಕೆಟ್ ಜೊತೆಯಾಟದಲ್ಲಿ ಹೆನ್ರಿಕ್ ಕ್ಲಾಸೆನ್ ಜೊತೆಗೆ 50 ರನ್‌ಗಳ ಜೊತೆಯಾಟ ನಡೆಸಿದರು. ಕ್ಲಾಸೆನ್ 19 ಎಸೆತಗಳಲ್ಲಿ 27 ರನ್ ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು, ಇವರ ವಿಕೆಟ್ ಬೆನ್ನಲ್ಲೇ ಮತ್ತೆ ಹೈದರಾಬಾದ್ ಕುಸಿತ ಅನುಭವಿಸಿತು.
ನಿತೀಶ್ ಕುಮಾರ್ 34 ಎಸೆತಗಳಲ್ಲಿ 3 ಬೌಂಡರಿ ಸಹಿತ 31 ರನ್ಗಳಿಸಿದರೆ, ಕಮಿಂಡು ಮೆಂಡಿಸ್ 5 ಎಸೆತಗಳಲ್ಲಿ ಕೇವಲ 1 ರನ್ಗಳಿಸಿ ಔಟ್ ಆದರು. ಯುವ ಬ್ಯಾಟರ್ ಅನಿಕೇತ್ ವರ್ಮಾ ಆಟ ಕೇವಲ 18ರನ್ಗಳಿಗೆ ಸೀಮಿತವಾಯಿತು. ಕಮಿನ್ಸ್ ಅಜೇಯ 22 ರನ್ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.
ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್ 17ಕ್ಕೆ4 ವಿಕೆಟ್ ಪಡೆದು ಮಿಂಚಿದರೆ, ಪ್ರಸಿಧ್ ಕೃಷ್ಣ 25ಕ್ಕೆ 2, ಸಾಯಿ ಕಿಶೋರ್ 24ಕ್ಕೆ 2 ವಿಕೆಟ್ ಪಡೆದು ಸನ್ರೈಸರ್ಸ್ ಹೈದರಾಬಾದ್ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.