ಆಸ್ಟ್ರೇಲಿಯಾಕ್ಕೆ 241 ರನ್ ಗುರಿ ನೀಡಿದ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 241 ರನ್ ಗಳ ಸವಾಲು ಒಡ್ಡಿದೆ. ಭಾರತ 10 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಲಷ್ಟೆ ಶಕ್ತವಾಯಿತು.

ವಿಶ್ವಕಪ್​ನಲ್ಲಿ ಹತ್ತು ಪಂದ್ಯಗಳನ್ನು ಗೆದ್ದುಕೊಂಡು ಭಾರತ ಫೈನಲ್​ ತಲುಪಿತ್ತು. ಆದರೆ ಫೈನಲ್​ ಪಂದ್ಯದಲ್ಲೇ ತಂಡ ನೀರಸ ಬ್ಯಾಟಿಂಗ್​ ಪ್ರದರ್ಶನ ನೀಡಿದೆ.

ಆರಂಭದಲ್ಲಿ ನಾಯಕ ರೋಹಿತ್ ಶರ್ಮ ಹಾಗೂ ಶುಭ್ ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಆದರೆ ಇವರುಗಳು ವಿಕೆಟ್ ಪತನವಾಗುತ್ತಿದ್ದಂತೆ ತಂಡದ ಮೊತ್ತಕ್ಕೂ ಹಿನ್ನಡೆಯಾಯಿತು. ಬಳಿಕ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ .ರಾಹುಲ್ ತಂಡಕ್ಕೆ ಆಸರೆಯಾದರು. ಇವರುಗಳ ಅರ್ಧ ಶತಕ ತಂಡದ ಒಟ್ಟು ಮೊತ್ತ ಏರಿಕೆಯಾಗುವಲ್ಲಿ ಪ್ರಮುಖ ಕಾರಣವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!