ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು: ಬಾಗಪ್ಪ ಹರಿಜನ ಆಗಂತುಕರ ಗುಂಡಿಗೆ ಬಲಿ

ದಿಗಂತ ವರದಿ ವಿಜಯಪುರ:

ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ನಗರದ ರೇಡಿಯೋ ಕೇಂದ್ರ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಎರಡು ದಶಕಗಳ ಹಿಂದೆ ಭೀಮಾತೀರದ ನಟೋರಿಯಸ್ ಹಂತಕನೆಂದೇ ಕುಖ್ಯಾತಿ ಪಡೆದಿದ್ದ ಚಂದಪ್ಪ ಹರಿಜನ ಅಪ್ಪಟ ಶಿಷ್ಯನಾಗಿದ್ದ ಬಾಗಪ್ಪ ಹರಿಜನನ ಮೇಲೆ ಈ ಹಿಂದೆಯು ಗುಂಡಿನ ದಾಳಿ ನಡೆದಿತ್ತು, ಕೆಲ ವರ್ಷಗಳ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ, ಸದ್ಯ ಆಗಂತುಕರ ಗುಂಡಿಗೆ ಬಲಿಯಾಗಿದ್ದಾನೆ.

ಮಾರಕಾಸ್ತ್ರಗಳಿಂದ ಬಾಗಪ್ಪನನ್ನು ಹತ್ಯೆಗೈದಿದ್ದು, ಬಾಗಪ್ಪನ ಎಡಗೈ ಮುಂಗೈ ಕಟ್ ಮಾಡಿದ್ದು, ಮುಖ ಹಾಗೂ ತಲೆಗೆ ಹೊಡೆದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲಿಸಿದರು. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!