ಹೊಸ ದಿಗಂತ ವರದಿ, ಕಲಬುರಗಿ:
ಧಾರಕಾರವಾಗಿ ಸುರಿದ ಮಳೆಯಿಂದ ಕಲಬುರಗಿ ತಾಲೂಕಿನ ಮುತ್ಯಾನ ಬಬಲಾದ್,ನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಧಾರಾಕಾರವಾಗಿ ಸುರಿದ ಮಳೆಯಿಂದ ಬಬಲಾದ್, ಹೊಡಲ್,ಶ್ರೀಚಂದ್,ಅಪಚಂದ್ ಹಳ್ಳಿಗಳ ರಸ್ತೆಗಳ ಸಂಪರ್ಕ,ವಿದ್ಯುತ್ ಸಂಪರ್ಕ ಕಡಿತಕೊಂಡಿದೆ.
ಇನ್ನೂ ಹಳ್ಳಗಳು ಭತಿ೯ಯಾಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಾರಿಗೆ ಸಂಚಾರ ಕೂಡ ಸ್ಥಗಿತಗೊಂಡಿದೆ. ಹೊಡಲ್ ನಿಂದ ಬಬಲಾದ್, ಗೆ ಬರಬೇಕಿದ್ದ ದಿನನಿತ್ಯದ ಸಾರಿಗೆ ಬಸ್,ಗಳು ಬುಧವಾರ ಬೆಳಿಗ್ಗೆ ಸಂಚಾರ ಮಾಡಿಲ್ಲ.
ಇನ್ನೋಂದೆಡೆ ಧಾರಾಕಾರ ಮಳೆಗೆ ರೈತಾಪಿ ವಗ೯ವು ಸಂತಸಗೊಂಡಿದ್ದು,ಬಿತ್ತನೆ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸಿದ್ದಾನೆ. ಮಳೆ ಬಾರದೆ ಮುಗಿಲಿನತ್ತ ಮುಖ ಮಾಡಿ ಕೂತಿದ್ದ, ರೈತ ಇದೀಗ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.