ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಶನಿವಾರ ರಾತ್ರಿ ಸುರಿದ ಮಳೆಗೆ 49 ಪ್ರದೇಶಗಳಲ್ಲಿ ಮಳೆಹಾನಿಯಾಗಿದೆ. 49 ಪ್ರದೇಶಗಳ ಪೈಕಿ 3ಕ್ಕೂ ಹೆಚ್ಚು ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆಯಾಗಿದೆ.
ಬಸವೇಶ್ವರ ನಗರದಲ್ಲಿ 109.50 ಮಿಮೀ, ನಾಗಪುರದಲ್ಲಿ 104 ಮಿಮೀ ಹಾಗೂ ಹಂಪಿನಗರದಲ್ಲಿ 102 ಮಿಮೀ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ರಾತ್ರಿ 9:45 ಗಂಟೆ ಬಳಿಕ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ಒಂದಡೆ ಮಳೆ, ಮತ್ತೊಂದಡೆ ಟ್ರಾಫಿಕ್ ಜಾಮ್ ಸಮಸ್ಯೆ ಏಕಕಾಲಕ್ಕೆ ಸಂಭವಿಸಿತ್ತು. ಬಳ್ಳಾರಿ ರಸ್ತೆ ಮಾರ್ಗ ಮಳೆಯಿಂದಾಗಿ ಸ್ಥಬ್ದವಾಗಿತ್ತು. ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿತ್ತು.ಇದಲ್ಲದೇ ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು. ಇನ್ನು ಎರಡು ದಿನ ಇದೇ ರೀತಿ ಮಳೆ ಸಂಭವಿಸುವ ಸಾಧ್ಯತೆ ಇದೆ.