ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಒಂದೆಡೆ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದ್ದು,ಇತ್ತ ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಅಬ್ಬರದ ಮಳೆ ಆಗಮನವಾಗಿದೆ.
ಇಂದು ಸಾಯಂಕಾಲ ಧಾರಾಕಾರವಾಗಿ ಮಳೆ (heavy rains) ಸುರಿಯಿತು, ಕೆಲಭಾಗಗಳಲ್ಲಿ ಇನ್ನೂ ಸುರಿಯತ್ತಿದೆ. ಶಾಂತಿನಗರ, ಕಲಾಸಿಪಾಳ್ಯ, ಮೆಜೆಸ್ಟಿಕ್, ರಾಜಾಜಿನಗರ (Rajajinagar), ಶ್ರೀನಗರ, ಜಯನಗರ, ವಿಜಯನಗರ, ಚಂದ್ರ ಲೇಔಟ್, ನಾಗರಬಾವಿ, ನಂದಿನಿ ಲೇಔಟ್, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಹೆಬ್ಬಾಳ, ಬನಶಂಕರಿ, ಬಸವನಗುಡಿ, ಕೆಂಗೇರಿ, ಗಿರಿನಗರ, ಆರ್ಟಿ ನಗರ, ರಾಜರಾಜೇಶ್ವರಿನಗರ, ಜಯನಗರ, ಮತ್ತಿಕೆರೆ ಮೊದಲಾದ ಭಾಗಗಳಲ್ಲಿ ಮಳೆಯಾಗಿದೆ.
ಜೋರಾದ ಮಳೆಯಿಂದ ದ್ವಿಚಕ್ರ ವಾಹನ ಸವಾರರು, ಬೇರೆ ವಾಹನ ಸವಾರರು ರಸ್ತೆಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿಯನ್ನು ಮಳೆ ನಿರ್ಮಿಸಿತ್ತು. ಹವಾಮಾನ ಇಲಾಖೆಯ (MET department) ಪ್ರಕಾರ ಮುಂದಿನ 5 ದಿನಗಳ ಕಾಲ ನಗರದಲ್ಲಿ ಮಳೆಯಾಗಲಿದೆ.