ಹೊಸದಿಗಂತ ವರದಿ ಮಡಿಕೇರಿ:
ಅಪ್ರಾಪ್ತ ಬಾಲಕಿಯನ್ನು ಪೀಡಿಸಿದ ಆರೋಪದಡಿ ಆಟೋ ಚಾಲಕನೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಕುಶಾಲನಗರ ಸಮೀಪದ ಮುಳ್ಳುಸೋಗೆ ಜನತಾ ಕಾಲೋನಿ ನಿವಾಸಿ ಮಂಜುನಾಥ ಎಂಬವರ ಪುತ್ರ ಹೇಮಂತಕುಮಾರ್ (22) ಬಂಧಿತ ಆರೋಪಿ.
ಆಟೋ ಚಾಲಕನಾಗಿರುವ ಹೇಮಂತ್ ತಮ್ಮ ಅಪ್ರಾಪ್ತ ಪುತ್ರಿಯನ್ನು ಪೀಡಿಸುತ್ತಿದ್ದು, ಈತನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಕುಶಾಲನಗರ ಗ್ರಾಮಾಂತರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.