October 15, 2026
Thursday, October 15, 2026
spot_img

‘ಕಾಲು ಮುಟ್ಟಿ ಕ್ಷಮೆ ಕೇಳು ಅಂದಿದ್ರು’: ಇಂಡಿಗೋ ವಿರುದ್ಧ ಸಿಡಿದೆದ್ದ ಮಾಜಿ ಉದ್ಯೋಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇಂಡಿಗೋದ ಮಾಜಿ ಉದ್ಯೋಗಿಯೊಬ್ಬರು ಸಂಸ್ಥೆಯ ಕೆಲಸದ ಸಂಸ್ಕೃತಿ ಕುರಿತು ಮಾಡಿರುವ ಗಂಭೀರ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಏನು ಆರೋಪ?

ಮಾಜಿ ಗ್ರೌಂಡ್ ಸ್ಟಾಫ್ ಮೊಹಮ್ಮದ್ ಜಂಶೀದ್, ಟೈ ಧರಿಸದೆ ಕೆಲಸಕ್ಕೆ ಬಂದ ಕಾರಣ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದ್ದು, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ. ತಾವು ಅದನ್ನು ನಿರಾಕರಿಸಿದ ಬಳಿಕ ಮತ್ತಷ್ಟು ಅವಮಾನ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ:

ದೂರು, ತನಿಖೆ… ಪ್ರತಿಕ್ರಿಯೆ ಏನೂ ಇಲ್ಲ

ಘಟನೆಯ ಬಳಿಕ ಸಂಸ್ಥೆಯ ನೈತಿಕತೆ ವಿಭಾಗಕ್ಕೆ ದೂರು ನೀಡಿದ್ದರೂ ತನಿಖೆಯ ಫಲಿತಾಂಶ ತೃಪ್ತಿಕರವಾಗಿರಲಿಲ್ಲ ಎಂದು ಜಂಶೀದ್ ತಿಳಿಸಿದ್ದಾರೆ. ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗಿಗಳೊಂದಿಗೆ ವರ್ತನೆಯ ಕುರಿತು ಪ್ರಶ್ನೆಗಳು ಎದ್ದಿವೆ. ಆದರೆ, ಈ ಆರೋಪಗಳಿಗೆ ಇಂಡಿಗೋ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Must Read