ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಿಂದ ನಂದಿ ಹಿಲ್ಸ್‌ಗೆ ಇಂದಿನಿಂದ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗೆ ಸಂತಸ ತಂದಿದೆ.
ಬೆಂಗಳೂರಿನಿಂದ 60 ಕಿಮೀ ದೂರ ಇರುವ ನಂದಿ ಬೆಟ್ಟ ಪ್ರವಾಸಿಗರಿಗೆ ಪರ್ಫೆಕ್ಟ್ ವೀಕೆಂಡ್ ಗೆಟ್‌ಅವೇ.
ವಾರಾಂತ್ಯದಲ್ಲಿ ನಂದಿಬೆಟ್ಟಕ್ಕೆ ಕಾಲಿಡಲೂ ಜಾಗ ಇರದಷ್ಟು ಜನ ಸಂದಣಿ ಇರುತ್ತದೆ. ಅಷ್ಟೇ ಅಲ್ಲದೆ ವಾಹನಗಳ ನಿಲುಗಡೆ, ಟ್ರಾಫಿಕ್ ಜಾಮ್ ಸಮಸ್ಯೆ ಇದ್ದೇ ಇರುತ್ತದೆ.
ಇದಕ್ಕೆ ಪರ್ಯಾಯವಾಗಿ ಇಂದಿನಿಂದ ಎಲೆಕ್ಟ್ರಿಕ್ ರೈಲು ಓಡಾಟ ನಡೆಸಲಿದೆ.
ಯಶವಂತಪುರ-ಚಿಕ್ಕಬಳ್ಳಾಪುರ, ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಕಂಟೋನ್ಮೆಂಟ್, ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ರೈಲುಗಳು ಸಂಚರಿಸಲಿವೆ.