ಪ್ರವಾಸಿಗರೇ ಗಮನಿಸಿ: ಸಾತೊಡ್ಡಿ ಜಲಪಾತ ವೀಕ್ಷಿಸಲು ಗುರುತಿನಚೀಟಿ ಕಡ್ಡಾಯ

ಹೊಸದಿಗಂತ ವರದಿ, ಯಲ್ಲಾಪುರ :

ತಾಲೂಕಿನ ಪ್ರಸಿದ್ಧ ಸಾತೊಡ್ಡಿ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಆಧಾರ ಕಾರ್ಡ, ವಾಹನದ ಲೈಸೆನ್ಸ, ಮತದಾರರ ಗುರುತಿನಚೀಟಿ ಸೇರದಂತೆ ಯಾವುದಾದರೂ ಒಂದು ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದ್ದು, ಪ್ರವಾಸಿಗರು ಸಹಕರಿಸಬೇಕು ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಕಂಚಿನಗದ್ದೆ ಪ್ರವಾಸಿಗರಲ್ಲಿ ವಿನಂತಿಸಿಕೊoಡಿದ್ದಾರೆ.

ಸಾತೊಡ್ಡಿ ಜಲಪಾತದಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಇದರಿಂದಾಗಿ ಸಾತೊಡ್ಡಿಗೆ ತೆರಳುವ ಮಾರ್ಗದ ಬಿಸಗೋಡ ಕ್ರಾಸ್‌ನಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿಯಿಂದ ಸಾತೋಡ್ಡಿ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಕುರಿತು ಮಾಹಿತಿ ನೀಡುವ ಬ್ಯಾನರನ್ನು ಆಳವಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!