Tuesday, August 16, 2022

Latest Posts

ಬಂದರಿನಲ್ಲಿ ದಿಢೀರ್ ವಿಷಾನಿಲ ಸೋರಿಕೆ: 13 ಸಾವು, 251 ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಸೋರಿಕೆ ಸಂಭವಿಸಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು 251 ಮಂದಿ ಗಾಯಗೊಂಡಿದ್ದಾರೆ. ರಾಸಾಯನಿಕ ಸೋರಿಕೆಯಿಂದ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸ್ಥಿತಿ ಮತ್ತಷ್ಟು ಹೆಚ್ಚಲವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂದರಿನಿಂದ ಹಡಗೊಂದಕ್ಕೆ ಕ್ರೇನ್‌ ಮೂಲಕ 25 ಟನ್ ಕ್ಲೋರಿನ್ ತುಂಬಿದ ಟ್ಯಾಂಕ್ ಗಳನ್ನು ಲೋಡ್‌ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೇಬಲ್‌ ವೈರ್‌ ತುಂಡಾಗಿ ಕ್ಲೋರಿನ್‌ ಟ್ಯಾಂಕ್‌ ಒಂದು ಕೆಳಗೆ ಬಿದ್ದು ಕಂಟೇನರ್ ಸ್ಫೋಟಗೊಂಡಿದೆ. ಈ ವೇಳೆ ವಿಷಾನಿಲ ಸೋರಿಕೆಯಾಗಿ ಹಳದಿ ಬಣ್ಣದ ದಟ್ಟಹೊಗೆ ಆವರಿಸಿತು. ಡಾಕ್ ನಲ್ಲಿದ್ದ ಕೆಲಸಗಾರರರು ದಿಕ್ಕಾಪಾಲಾಗಿ ಓಡುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

ಘಟನೆಯ ನಂತರ ಅಕಾಬಾದ ದಕ್ಷಿಣ ಬೀಚ್ ಅನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಕಿಟಕಿಗಳನ್ನು ಮುಚ್ಚಿ ಮನೆಯೊಳಗೆ ಇರುವಂತೆ ಅಧಿಕಾರಿಗಳು ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.
ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗಳು ತುಂಬಿವೆ ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಕಾಬಾದ ಆರೋಗ್ಯ ನಿರ್ದೇಶಕ ಜಮಾಲ್ ಒಬೇದತ್ ಹೇಳಿದ್ದಾರೆ.
ಕೆಂಪು ಸಮುದ್ರದ ಉತ್ತರ ತುದಿಯಲ್ಲಿರುವ ಅಕಾಬಾ ಬಂದರು ಬಹಳ ಹಿಂದಿನಿಂದಲೂ ಇರಾಕಿನ ಆಮದು ಮತ್ತು ರಫ್ತುಗಳಿಗೆ ಪ್ರಮುಖ ಸಾರಿಗೆ ಮಾರ್ಗವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss