ಮೋದಿ ಹಣಿಯಲು ಹೊರಟಿದ್ದ ತೀಸ್ತಾ ಸೆಟಲ್ವಾಡಳ ಕರ್ಮಕಾಂಡಗಳ ಬಗ್ಗೆ ಗೊತ್ತೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಾನವ ಹಕ್ಕುಗಳ ಕಾರ್ಯಕರ್ತೆ , ಪತ್ರಕರ್ತೆಯ ಮುಖವಾಡ ತೊಟ್ಟು ಸಾಮಾಜಿಕ ಕಾರ್ಯದ ಹೆಸರಲ್ಲಿ ಕೋಟಿ ಕೋಟಿ ಆಸ್ತಿಗಳಿಕೆ ಮಾಡುತ್ತಿದ್ದ ನಕಲಿ ಮಾನವತಾ ವಾದಿಗಳ ಮುಖವಾಡ ಈಗ ಮತ್ತೊಮ್ಮೆ ಕಳಚಿಬಿದ್ದಿದೆ. ಗುಜರಾತ್‌ ಗಲಭೆಯಲ್ಲಿ ಮೋದಿಯನ್ನು ಹಣಿಯಲು ಎಷ್ಟೇ ಪ್ರಯತ್ನಪಟ್ಟರೂ ಕೊನೆಯಲ್ಲಿ ತೀಸ್ತಾ ಸೆಟಲ್ವಾಡ್‌ ಎಂಬ ತಥಾಕಥಿತ ಪತ್ರಕರ್ತೆಯ ಕರ್ಮಕಾಂಡಗಳು ಜಗಜ್ಜಾಹೀರಾಗಿದೆ. ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ತೀಸ್ತಾ ಸೆಟಲ್ವಾಡ್‌ ಬಳಿ ಯಾವ ರಾಜಕಾರಣಿಗೂ ಕಮ್ಮಿಯಿಲ್ಲದಷ್ಟು ಆಸ್ತಿಯಿದೆ.

ತೀಸ್ತಾ ಸೆಟಲ್ವಾಡ್‌ ಹೆಸರಿನಲ್ಲಿ ಮುಂಬೈನ ಅತ್ಯಂತ ಶ್ರೀಮಂತ ಪ್ರದೇಶವಾದ ಜುಹು ರಸ್ತೆಯಲ್ಲಿ, ಅಮಿತಾಬ್ ಬಚ್ಚನ್ ಬಂಗಲೆಯ ಬಳಿ “ನಿರಂತ್” ಎಂಬ ಬಂಗಲೆ ಇದೆ, ಅದು ಅಮಿತಾಬ್ ಅವರ ಬಂಗಲೆಗಿಂತ 3 ಪಟ್ಟು ದೊಡ್ಡದಾಗಿದೆ, ಆ ಬಂಗಲೆಯ ಬೆಲೆ 500 ಕೋಟಿ ರೂ. ಒಬ್ಬ ಸಾಮಾಜಿಕ ಕಾರ್ಯಕರ್ತೆಯ ಬಳಿ ಇಷ್ಟೊಂದು ಬರಲು ಹೇಗೆ ಸಾಧ್ಯ? ಇದಕ್ಕೆಲ್ಲಾ ಕಾರಣವೆಂದರೆ ಕಿರುಕುಳ, ಬೆದರಿಕೆ, ನಕಲಿ ನಿರೂಪಣೆ, ಸರ್ಕಾರಿ ಅವ್ಯವಸ್ಥೆ, ನ್ಯಾಯಾಲಯಗಳ ದುರುಪಯೋಗ ಮತ್ತು ಸೋ ಕಾಲ್ಡ್‌ ಎನ್‌ಜಿಒ ಗಳ ಚಿಲ್ಲಿಂಗ್‌ ಥ್ರೆಡ್.‌

ತೀಸ್ತಾ ಸೆಟಲ್ವಾಡ್‌ ಮೂಲತಃ ಒಬ್ಬ ಗುಜರಾತಿ ಸಮುದಾಯಕ್ಕೆ ಸೇರಿದವರು. ಆಕೆಯ ಮುತ್ತಜ್ಜ ಬ್ರಿಟೀಷರ ನಿಷ್ಠರಾಗಿದ್ದರೆ ಆಕೆಯ ಅಜ್ಜ ನೆಹರೂರ ಆಪ್ತರಾಗಿದ್ದರು ಮತ್ತು ಸ್ವಾತಂತ್ರ ಬಂದನಂತರ ಭಾರತದ ಮೊದಲ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದರು. 1950ರ ದಶಕದಲ್ಲಿ ನೆಹರೂರ ಆಣತಿಯಂತೆ ಹಿಂದೂ ವಿರೊಧಿ ಕಾನೂನುಗಳನ್ನು ಜಾರಿಗೆ ತರುವಲ್ಲಿ ಇವರ ಪಾತ್ರವಿದೆ. ಇದಲ್ಲದೇ ಆಕೆಯ ತಂದೆ ಕೂಡ ಒಬ್ಬ ವಕೀಲರೇ ಆಗಿದ್ದರು. ಹಾಗಾಗಿಯೇ ನ್ಯಾಯಾಂಗ ವ್ವಯಸ್ಥೆಯನ್ನು ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳಬಹುದು ಎಂಬುದು ತೀಸ್ತಾ ಸೆಟಲ್ವಾಡ್‌ ಗೆ ರಕ್ತಗತವಾಗಿಯೇ ಬಂದಿತ್ತು ಎನ್ನಬಹುದು.

ಬಾಲ್ಯದಿಂದಲೂ ಕಮ್ಯುನಿಸ್ಟ್ ಸಿದ್ಧಾಂತವಾದಿಯಾಗಿದ್ದ ತೀಸ್ತಾ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿ1993ರ ಗಲಭೆಗಳನ್ನು ವರದಿ ಮಾಡಿದರು. ಜಾವೇದ್‌ ಆನಂದ್‌ ಎಂಬಾತನೊಂದಿಗೆ ವಿವಾಹವಾದಳು. ಮತ್ತು 90ರ ದಶಕದಲ್ಲಿಯೇ ತನ್ನ ಎನ್‌ಜಿಒಗಾಗಿ ಫೋರ್ಡ್ ಫೌಂಡೇಶನ್‌ನಿಂದ ಹಣವನ್ನು ಪಡೆಯಲು ಪ್ರಾರಂಭಿಸಿದಳು. 2002ರ ಏಪ್ರಿಲ್‌ ನಲ್ಲಿ ತೀಸ್ತಾ ಸೆಟಲ್ವಾಡ್‌, ಆಕೆಯ ಪತಿ, ಫಾದರ್ ಸೆಡ್ರಿಕ್ ಪ್ರಕಾಶ್ (ಕ್ಯಾಥೋಲಿಕ್ ಪಾದ್ರಿ), ಅನಿಲ್ ಧಾರ್ಕರ್ (ಪತ್ರಕರ್ತ), ಅಲಿಕ್ ಪದಮ್ಸೀ, ಜಾವೇದ್ ಅಖ್ತರ್, ವಿಜಯ್ ತೆಂಡೂಲ್ಕರ್ ಮತ್ತು ರಾಹುಲ್ ಬೋಸ್ ಅವರೊಂದಿಗೆ “ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (CJP)” ಎಂಬ NGO ಅನ್ನು ಸ್ಥಾಪಿಸಿದರು.

ಮುಂದೆ 2002ರ ಗಲಭೆಗೆ ಗುಜರಾತ್‌ ಸರ್ಕಾರವೇ ಕಾರಣ ಎಂದು ಗುಜರಾತ್‌ ಸರ್ಕಾರದ ವಿರುದ್ಧ ಕೇಸ್‌ ಹಾಕಲು ಪ್ರಾರಂಭಿಸಿದರು. 2002ರ ಗಲಭೆಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿಯವರನ್ನು ಮಣಿಸಲು (ಮುಗಿಸಲು?) ವ್ಯವಸ್ಥಿತ ಸಂಚು ಪ್ರಾರಂಭವಾಯಿತು, ಮಾಧ್ಯಮಗಳ ಮೂಲಕ, ನ್ಯಾಯಾಂಗದ ದುರುಪಯೋಗದ ಮೂಲಕ ಮೋದಿ ವಿರುದ್ಧ ಕುತಂತ್ರಗಳನ್ನು ಮಾಡಿದರು ಆದರೆ ಆ ಎಲ್ಲಾ ಪ್ರಯತ್ನಗಳೂ ವಿಫಲವಾದವು.

ಇತ್ತೀಚೆಗೆ ಆಕೆಯ ಬ್ಯಾಂಕ್‌ ಅಕೌಂಟ್‌ ಅನ್ನು ಮುಕ್ತಗೊಳಿಸುವಂತೆ ಸುಪ್ರಿಂ ಕೋರ್ಟ್‌ ಗೆ ಆಕೆ ಅರ್ಜಿ ಸಲ್ಲಿಸಿದ್ದಳು ಆದರೆ ಆಕೆಯ ಅರ್ಜಿಯನ್ನು ಸುಪ್ರಿಂ ಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿದೆ. ಈ ಅಕೌಂಟ್‌ಗಳಲ್ಲಿ 2002ರ ಸಂತ್ರಸ್ತರ ಹೆಸರಲ್ಲಿ ಬಾಚಿಕೊಂಡಿದ್ದ ಕೋಟ್ಯಂತರ ರೂಪಾಯಿ ಹಣವಿತ್ತು.

ಇನ್ನು 2002ರ ಬೇಕರಿ ಕೇಸ್‌ ಒಂದರಲ್ಲಿ ಸಾಕ್ಷಿದಾರರೆಂದು ಹೇಳಲಾಗಿರುವ ಯಸ್ಮೀನ್‌ ಭಾನು ಎಂಬಾಕೆ ʼತೀಸ್ತಾ ಸೆಟಲ್ವಾಡ್‌ ತನಗೆ ಆರ್ಥಿಕ ಸಹಾಯ ಮಾಡುವುದಾಗಿ ಆಮಿಷವೊಡ್ಡಿ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದರು ಎಂದು ಸ್ವತಃ ಒಪ್ಪಿಕೊಂಡಿದ್ದಾಳೆ. ಇದಲ್ಲದೇ ಯುಪಿಎ ಸರ್ಕಾರದ ಅವಧಿಯಲ್ಲಿ ತನ್ನ ಟ್ರಸ್ಟ್‌ ಗೆ ಮಾನವಸಂಪನ್ಮೂಲ ಸಚಿವಾಲಯದಿಂದ 1.4 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದಕ್ಕೆ ಆಕೆಯ ಮೇಲೆ ಪ್ರಕರಣ ದಾಖಲಾಗಿದೆ. ಇದರ ಕುರಿತು ಆಕೆಯ ಸಹವರ್ತಿಯೇ ದೂರು ಕೊಟ್ಟಿದ್ದ. ಇನ್ನುದ್ವೇಷಪೂರಿತ ಸಂಗತಿಗಳ್ನನೊಳಗೊಂಡ ಪಠ್ಯಗಳನ್ನು ಶಾಲಾ ಮಕ್ಕಳ ಪುಸ್ತಕದಲ್ಲಿ ಅಳವಡಿಸುವಂತೆ ಆಕೆ ಮುಂದಿಟ್ಟಿದ್ದಳು. ಆದರೆ ಎನ್‌ಸಿಇಆರ್‌ಟಿ ಇದನ್ನು ತಿರಸ್ಕರಿಸಿತ್ತು. ಆರೆಸ್ಸೆಸ್‌ ಮತ್ತು ಬಿಜೆಪಿಯವರು ಸೇನೆಗೆ ರಕ್ಷಾಬಂಧನದ ರಾಖಿಗಳನ್ನು ಕಳುಹಿಸಿದ್ದಕ್ಕೆ ಅವರು ಸೇನೆಯಲ್ಲೂ ಕೋಮು ಭಾವನೆ ಬಿತ್ತುತ್ತಿದ್ದಾರೆ ಎಂದು ತೀಸ್ತಾ ಬೊಬ್ಬೆ ಹೊಡೆದಿದ್ದರು. ಇನ್ನು ಸುಳ್ಳುಗಳನ್ನು ಹರಡಲು ಆಕೆಯ ಎನ್‌ಜಿಒಗೆ ಕಾಂಗ್ರೆಸ್‌ ಹಾಗೂ ಸಿಪಿಐಎಂ ಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಹಣ ಸಂದಾಯವಾಗುತ್ತಿತ್ತು ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಇದಲ್ಲದೇ ತೀರಾ ಇತ್ತೀಚೆಗೆ ಶಹೀನ್ ಬಾಗ್‌ ನ ಪ್ರತಿಭಟನಾಕಾರರಿಗೆ ಸುಪ್ರಿಂ ಕೋರ್ಟಲ್ಲಿ ಏನು ಹೇಳಬೇಕು ಎಂಬುದನ್ನು ಹೇಳಿಕೊಟ್ಟದ್ದು ಕೂಡ ಇದೇ ತೀಸ್ತಾ ಸೆಟಲ್ವಾಡ್‌.

ಹೀಗೆ ಸಾಲು ಸಾಲು ಸುಳ್ಳಿನ ಕಂತೆಗಳನ್ನು ಕಟ್ಟಿ ಸಮಾಜದ ದಿಕ್ಕು ತಪ್ಪಿಸುತ್ತಿದ್ದವರ ಮುಖವಾಡಗಳು ಒಂದೊಂದಾಗಿಯೇ ಹೊರಬರುತ್ತಿವೆ. ತೀಸ್ತಾ ಸೆಟಲ್ವಾಡ್‌ ಹೆಸರು ಅಂತಹ ತಥಾಕಥಿತ ನಕಲಿ ಹೆಸರುಗಳ ಗುಂಪಿಗೆ ಇನ್ನೊಂದು ಸೇರ್ಪಡೆಯಷ್ಟೇ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!