August 30, 2026
Sunday, August 30, 2026
spot_img

ಹಿರೇಬಾಗೇವಾಡಿಯಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ, ಹಿರೇಬಾಗೇವಾಡಿ

ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಾಯಗೊಂಡ ಘಟನೆ ಸಮೀಪದ ಬಡಾಲ ಅಂಕಲಗಿಯ ಜಮೀನಿನಲ್ಲಿ ಸಂಭವಿಸಿದೆ.

ಬಡಸ್ ಕೆಎಚ್ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮಾರುತಿ ರುದ್ರಪ್ಪ ಅಲಾಬದಿ (೨೪) ಮೃತ. ಈತ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಪಲ್ಟಿ ಹೊಡೆಸಿದ್ದಾನೆ. ಟ್ರ್ಯಾಕ್ಟರ್ ನಲ್ಲಿದ್ದ ಬಡಾಲ ಅಂಕಲಗಿ ಗ್ರಾಮದ ಬಸಪ್ಪ ಸಣ್ಣಮಲ್ಲಪ್ಪ ಕುಡುಚಿ (೫೨) ಇವರಿಗೆ ಗಾಯಗಳಾಗಿವೆ. ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !