ತರಕಾರಿ ಸೊಪ್ಪಿನ ಮೇಲೆ ಉಗುಳಿ ಮಾರಾಟಕ್ಕೆ ಯತ್ನಿಸಿದ ವ್ಯಾಪಾರಿ: ಗ್ರಾಹಕರಿಂದ ಆಕ್ರೋಶ, ದೂರು ದಾಖಲು

ಹೊಸದಿಗಂತ ವರದಿ,ಕಾರವಾರ:

ಪಟ್ಟಣದಲ್ಲಿ ಭಾನುವಾರದ ಸಂತೆಯಲ್ಲಿ ತರಕಾರಿ ಮಾರಾಟಕ್ಕೆ ಬಂದ ವ್ಯಾಪಾರಿಯೊಬ್ಬ ಮಾರಾಟ ಮಾಡುವ ತರಕಾರಿ ಸೊಪ್ಪಿನ ಮೇಲೆ ಉಗುಳಿ ಮಾರಾಟಕ್ಕೆ ಇಟ್ಟಿರುವುದು ಗ್ರಾಹಕರೊಬ್ಬರು ಮೊಬೈಲ್ ಮೂಲಕ ಚಿತ್ರೀಕರಣ ಮಾಡಿಕೊಂಡದ್ದು ವ್ಯಾಪಾರಿಯ ವರ್ತನೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಈ ಕುರಿತು ಪೊಲೀಸ್ ದೂರು ದಾಖಲಾಗಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಬಾತನೇ ಮಾರಾಟ ಮಾಡುವ ತರಕಾರಿ ಸೊಪ್ಪಿನ ಮೇಲೆ ಉಗುಳಿ ಮಾರಾಟಕ್ಕೆ ಇರಿಸಿದ್ದು ಅದನ್ನೇ ಗ್ರಾಹಕರಿಗೂ ಮಾರಾಟ ಮಾಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು ತರಕಾರಿ ಮೇಲೆ ಪದೇ ಪದೇ ಎಂಜಲು ಉಗಿದು ಧಾರ್ಮಿಕ ಭಾವನಿಗಳಿಗೆ ದಕ್ಕೆ ತಂದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ನಗರಸಭೆ ಮತ್ತು ಪೊಲೀಸ್ ಇಲಾಖೆಗೆ ದೂರು ಬಂದ ಕಾರಣ ನಗರಸಭೆ ಸಿಬ್ಬಂದಿಗಳು ತರಕಾರಿಯನ್ನು ವಶಕ್ಕೆ ಪಡೆದಿದ್ದು ಕೃತ್ಯ ಎಸಗಿದ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಸಂತೆ ಮಾರುಕಟ್ಟೆಗಳಲ್ಲಿ ತರಕಾರಿ ಮಾರಾಟಕ್ಕೆ ಬರುವ ಬಹಳಷ್ಟು ಜನ ವ್ಯಾಪಾರಿಗಳು ತರಕಾರಿಗಳ ಮೇಲೆ ಉಗುಳಿ ಮಾರಾಟ ಮಾಡುವ ಕೃತ್ಯಗಳನ್ನು ನಡೆಸುತ್ತಿದ್ದು ಗ್ರಾಹಕರು ಜಾಗರೂಕರಾಗಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!