ಕಾಲಿನಲ್ಲಿದೆ ಟ್ಯಾಗ್ ಬೆನ್ನಲ್ಲಿದೆ ಯಂತ್ರ: ಕಾರವಾರದ ಆಗಸದಲ್ಲಿ ನಿಗೂಢ ಹದ್ದಿನ ಹಾರಾಟ

ಹೊಸದಿಗಂತ ವರದಿ,ಕಾರವಾರ:

ನಗರದ ಕೋಡಿಭಾಗ ನದಿವಾಡದಲ್ಲಿ ಕಾಲಿನಲ್ಲಿ ಟ್ಯಾಗ ಮತ್ತು ಬೆನ್ನಮೇಲೆ ಚಿಕ್ಕ ಯಂತ್ರವನ್ನು ಅಳವಡಿಸಿದ ಹದ್ದು ಪಕ್ಷಿಯೊಂದು ಕಂಡು ಬಂದಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗುವಂತಾಗಿದೆ.

ನದಿವಾಡ ಜನವಸತಿ ಪ್ರದೇಶದ ಮನೆಯೊಂದರ ಮೇಲೆ ಬಂದು ಕುಳಿತ ಹದ್ದು ಪಕ್ಷಿಯ ಒಂದು ಕಾಲಿನಲ್ಲಿ ನೀಲಿ ಬಣ್ಣ ರಿಂಗ್ ಇನ್ನೊಂದು ಕಾಲಿನಲ್ಲಿ ಹಸಿರು ಬಣ್ಣ ರಿಂಗ್ ಇದ್ದು ಅದರ ಮೇಲೆ ಎನೋ ಅಕ್ಷರ ಬರೆದಿದ್ದು ಕಂಡು ಬಂದಿದೆ. ಅಲ್ಲದೆ ಇದರ ಬೆನ್ನ ಹಿಂದೆ ಕ್ಯಾಮರಾ ದಂತ ಚಿಕ್ಕ ಯಂತ್ರವನ್ನು ಆಳವಡಿಸಿರುವಂತದ್ದು ಕಂಡು ಬಂದಿದೆ.

ಮನೆಯೊಂದರ ಮೇಲೆ ಬಂದು ಕುಳಿತ ಈ ಹದ್ದು ಕಾಣುತ್ತಿದ್ದಂತೆ ಎಲ್ಲರ ಬಾಯಲ್ಲಿ ಪ್ರಚಾರವಾಗಿ ಇದನ್ನು ನೋಡಲು ಅಕ್ಕಪಕ್ಕದ ಜನರು ಓಡೋಡಿ ಬರತೊಡಗಿದರು. ಆದರೆ ಈ ರೀತಿ ಅಪರೂಪದ ಯಂತ್ರಗಳನ್ನು ಅಳವಡಿಸಿರುವ ಈ ಹದ್ದು ಎಲ್ಲಿಂದ ಬಂತು? ಅದರ ಕಾಲಿಗೆ ತೊಡಿಸಿರುವ ರಿಂಗ್ ಗಳು ಮತ್ತು ಬೆನ್ನ ಹಿಂದೆ ಅಳವಡಿಸಿದ ಯಂತ್ರದ ಬಗ್ಗೆ ಸಾರ್ವಜನಿಕರು ಹಲವು ರೀತಿಯಲ್ಲಿ ಪ್ರಶ್ನಿಸುವಂತಾಗಿದೆ.

ಕಾರವಾರದಲ್ಲಿ ಒಂದು ಕಡೆ ಸಿಬರ್ಡ ನೌಕಾಯೋಜನೆ, ಇನ್ನೊಂದು ಕಡೆ ಕೈಗಾ ಅಣುವಿದ್ಯುತ್ ಸ್ಥಾವರ, ಕಾಳಿ ವಿದ್ಯುತ್ ಘಟಕಗಳು ಇರುವಾಗ ಈ ಹದ್ದು ಈ ಭಾಗದಲ್ಲಿ ಕಂಡು ಬಂದಿರುವ ಬಗ್ಗೆ ಸ್ಥಳೀಯರು ಆತಂಕವನ್ನು ವ್ಯಕ್ತಪಡಿಸಿ ಕೂಡಲೇ ಪೋಲಿಸರಿಗೆ ಸುದ್ದಿ ತಲುಪಿಸಿ ಹದ್ದಿನ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ .

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!