ಪೊಲೀಸ್‌ ಸಮಯ‌ ಪ್ರಜ್ಞೆಯಿಂದ ಮಗು ಬಚಾವ್‌, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಸ್‌ನಡಿ ಸಿಕ್ಕಿ ಪ್ರಾಣ ಬಿಡಬೇಕಿದ್ದ ಪುಟ್ಟ ಕಂದಮ್ಮನನ್ನು ಟ್ರಾಫಿಕ್‌ ಪೊಲೀಸ್‌ ಕಾಪಾಡಿರುವ ಘಟನೆ ಎಲ್ಲೆಡೆ ವೈರಲ್‌ ಆಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಎಲೆಕ್ಟ್ರಿಕ್ ರಿಕ್ಷಾದಿಂದ ಬಿದ್ದ ಮಗುವನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ಮಗುವನ್ನು ಕಾಪಾಡಿದ್ದಾರೆ. ಈ ವಿಡಿಯೋವನ್ನು ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ರಾಫಿಕ್‌ ಕ್ಲಿಯರ್‌ ಮಾಡುತ್ತಿದ್ದ ಪೊಲೀಸ್‌ ಕಣ್ಣಿಗೆ ರಸ್ತೆ ತಿರುವಿನಲ್ಲಿ ಆಟೋದಿಂದ ಮಗು ಕೆಳಗೆ ಬಿದ್ದ ದೃಶ್ಯ ಕಂಡಿದೆ. ಅದೇ ಸಮಯಕ್ಕೆ ಹಿಂಬದಿಯಿಂದ ಬಸ್‌ ಬರುತ್ತಿದ್ದನ್ನು ಗಮನಿಸಿ, ಕೂಡಲೇ ಬಸ್‌ ಅನ್ನು ಪೊಲೀಸ್‌ ತಡೆದಿದ್ದಾರೆ. ಬಸ್‌ ಚಾಲಕ ಕೂಡ ತನ್ನ ಸಮಯ ಪ್ರಜ್ಞೆಯಿಂದ ಬ್ರೇಕ್‌ ಹಾಕಿದ್ದಕ್ಕೆ ಮಗು ಬಚಾವಾಗಿದೆ. ಕೂಡಲೇ ಮಗುವನ್ನು ಕಾಪಾಡಿ ತಾಯಿಗೆ ಒಪ್ಪಿಸಿದ್ದಾರೆ.

ಈ ವೈರಲ್‌ ವಿಡಿಯೋದಲ್ಲಿ ಕೆಲವರು ಟ್ರಾಫಿಕ್ ಪೋಲೀಸರ ಶೌರ್ಯವನ್ನು ಶ್ಲಾಘಿಸಿದರೆ ಕೆಲವರು ಬಸ್ ಚಾಲಕನ ತ್ವರಿತ ಪ್ರತಿಕ್ರಿಯೆಯನ್ನು ಪ್ರಶಂಸಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!