ಸಂಚಾರ ಸೂಚ್ಯಂಕ ಬಿಡುಗಡೆ: ಬೆಂಗಳೂರು ವಿಶ್ವದಲ್ಲೇ 6ನೇ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರ!

ಹೊಸದಿಗಂತ ವರದಿ,ಬೆಂಗಳೂರು:

ಈ ಮೊದಲು ವಿಶ್ವದಲ್ಲೇ ೨ನೇ ಅತೀ ಹೆಚ್ಚು ಸಂಚಾರ ದಟ್ಟಣೆ ನಗರ ಎನ್ನುತ್ತಿದ್ದ ಬೆಂಗಳೂರು, ೨೦೨೩ರಲ್ಲಿ ೬ನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ.

ಡಚ್ ಲೋಕೇಷನ್ ಟೆಕ್ನಾಲಜಿ ಸಂಸ್ಥೆಯಾದ ಟಾಮ್ ಇತ್ತೀಚೆಗೆ ೨೦೨೩ರ ವಿಶ್ವ ಸಂಚಾರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ನಗರ ಸಂಚಾರ ವ್ಯವಸ್ಥೆ ಸೂಚ್ಯಂಕದಲ್ಲಿ ಗಣನೀಯ ಬದಲಾವಣೆ ಆಗಿದೆ. ೨೦೨೨ನೇ ಸಾಲಿನಲ್ಲಿ ಬೆಂಗಳೂರು ವಿಶ್ವದಲ್ಲೇ ೨ನೇ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿದ್ದು, ೨೦೨೩ರಲ್ಲಿ ೬ನೇ ಸ್ಥಾನಕ್ಕೆ ಇಳಿದಿದೆ. ಅದನ್ನು ಇನ್ನಷ್ಟು ಸುಧಾರಣೆಗೆ ತರಲು ಕೆಲ ಯೋಜನೆಗಳನ್ನು ರೂಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಟಾಮ್ ಸಂಸ್ಥೆ ಪ್ರಕಾರ, ಮೊದಲ ಸ್ಥಾನದಲ್ಲಿ ಲಂಡನ್, ಎರಡು ಹಾಗೂ ಮೂರನೇ ಸ್ಥಾನದಲ್ಲಿ ಅನುಕ್ರಮವಾಗಿ ಐರ್ಲೆಂಡ್ ರಾಜಧಾನಿ ಡಬ್ಲೀನ್, ಕೆನಡಾದ ಟೊರೊಂಟೊ ನಗರವಿದ್ದರೆ, ಆರನೇ ಸ್ಥಾನದಲ್ಲಿ ಬೆಂಗಳೂರು ಹಾಗೂ ಪುಣೆ ಏಳನೇ ಸ್ಥಾನದಲ್ಲಿದೆ ಎಂದು ಸಂಸ್ಥೆಯ ಅಧ್ಯಯನದ ವರದಿ ನೀಡಿದೆ.

೨೦೨೨ರಲ್ಲಿ ಪ್ರತಿ ಗಂಟೆಗೆ ಸರಾಸರಿ ವೇಗ ೧೪ ಕಿ.ಮೀ. ಇದ್ದರೆ, ೨೦೨೩ರಲ್ಲಿ ೧೮ ಕಿ.ಮೀ.ಗೆ ಏರಿಕೆಯಾಗಿದೆ. ಅಲ್ಲದೆ ಪ್ರಯಾಣ ಸಮಯ ಒಂದು ನಿಮಿಷ ತಗ್ಗಿರುವುದು ಕಂಡುಬಂದಿದೆ. ೨೦೨೨ರಲ್ಲಿ ನಗರದಲ್ಲಿ ಪ್ರತಿ ೧೦ ಕಿ.ಮೀ ಕ್ರಮಿಸಲು ೨೮ ನಿಮಿಷ ೧೧ ಸೆಕೆಂಡ್ ತಗುಲುತಿತ್ತು. ೨೦೨೩ರಲ್ಲಿ ೨೭ ನಿಮಿಷ ೧೧ ಸೆಕೆಂಡ್‌ಗೆ ತಗ್ಗಿದೆ. ವಿಶ್ವದ ೧೦ ನಗರಗಳ ಪೈಕಿ ಬೆಂಗಳೂರು ನಗರ ಮಾತ್ರವೇ ಪ್ರಯಾಣ ಸಮಯದಲ್ಲಿ ಒಂದು ನಿಮಿಷ ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದು ೨೦೨೩ರಲ್ಲಿ ೧೦ ಲಕ್ಷ ವಾಹನಗಳ ನೋಂದಣಿಗಳ ಹೊರತಾಗಿಯೂ ಸಂಚಾರ ದಟ್ಟಣೆ ಸುಧಾರಣೆ ಕಂಡಿದೆ ಎಂದು ಅವರು ಮಾಹಿತಿ ನೀಡಿದರು.

ಸುಧಾರಣೆಗೆ ಕಾರಣವೇನು?
ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹಲವು ಸುಧಾರಣ ಕ್ರಮಕೈಗೊಂಡಿದ್ದಾರೆ. ಸು‘ಾರಿತ ಸಂಚಾರ ನಿರ್ವಹಣೆಯಲ್ಲಿ ಪ್ರಮುಖವಾಗಿ ಹೆಬ್ಬಾಳ ಜಂಕ್ಷನ್, ಟಿನ್ ಫ್ಯಾಕ್ಟರಿ, ಗೊರಗುಂಟೆಪಾಳ್ಯ ಹಾಗೂ ಸಾರಕ್ಕಿ ಜಂಕ್ಷನ್ ಸೇರಿ ಹಲವಾರು ದಟ್ಟಣೆಯ ಜಂಕ್ಷನ್‌ಗಳಲ್ಲಿ ದಟ್ಟಣೆ ನಿವಾರಣೆಗೆ ಕ್ರಮಕೈಗೊಂಡಿದ್ದಾರೆ. ವಾಹನ ದಟ್ಟಣೆಯಾಗುತ್ತಿದ್ದ ರಸ್ತೆ ವಿ‘ಜಕಗಳನ್ನು ಮುಚ್ಚಿಸಲಾಗಿದ್ದುಘಿ, ಅನಗತ್ಯ ಬಸ್ ನಿಲ್ದಾಣಗಳ ತೆರವು, ಅವೈಜ್ಞಾನಿಕ ಯು ತಿರುವು ಬಂದ್, ಫ್ರೀ ಸಿಗ್ನಲ್‌ಗೆ ಒತ್ತು ನೀಡಿದ್ದರಿಂದ ಸುಗಮವಾಗಿ ವಾಹನ ಸಂಚಾರಕ್ಕೆ ಕಾರಣವಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವುದಕ್ಕಿಂತ ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ. ಪೀಕ್ ಅವರ್ ನಿರ್ವಹಣೆಗೆ ‘ಾರೀ ಗಾತ್ರದ ವಾಹನಗಳ ನಿಷೇ‘ ಮತ್ತು ಮಾರ್ಗ ಬದಲಾವಣೆ ಹಾಗೂ ಅತ್ಯಾ‘ುನಿಕ ತಂತ್ರಜ್ಞಾನಗಳ ಬಳಕೆ, ಟ್ರಾಫಿಕ್ ಇಂಜಿನಿಯರಿಂಗ್, ಸುಧಾರಿತ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ದಟ್ಟಣೆ ಸುಧಾರಣೆಗೆ ‘ವಿಷ್ಯದ ಯೋಚನೆಗಳೇನು?
*ಐಟಿಸಿಎಸ್ ಸಿಗ್ನಲ್‌ಗಳು. ಈ ಮೂಲಕ ಅತ್ಯುತ್ತಮ ಸಿಗ್ನಲಿಂಗ್‌ಗೆ ವ್ಯವಸ್ಥೆ ನೀಡುವುದು.
*ಎ೧ ಮತ್ತು ಇತರೆ ಅತ್ಯಾಧುನಿಕ ತಂತ್ರಜ್ಞಾನಗಳ ಆ‘ಾರಿತ ವ್ಯವಸ್ಥೆಗಳ ಬಳಕೆ.
*ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಟ್ರಾಫಿಕ್ ಅರಿವನ್ನು ಸುಧಾರಿಸಲು ವಿವಿ‘ ಏಜೆನ್ಸಿಗಳು, ಪ್ರಮುಖ ಸಂಶೋ‘ನಾ ಸಂಸ್ಥೆಗಳು, ಎನ್‌ಜಿಒಗಳೊಂದಿಗೆ ಸಹಯೋಗ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!