ನಾಯಿ ತಿನ್ನದ ಬಿಸ್ಕೆಟ್‌ ಕಾರ್ಯಕರ್ತನಿಗೆ ನೀಡಿದ್ರಾ ರಾಹುಲ್‌?: ಈ ಕುರಿತು ಕಾಂಗ್ರೆಸ್ ನಾಯಕ ಕೊಟ್ರು ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatra) ವೇಳೆ ರಾಹುಲ್ ಗಾಂಧಿ ನಾಯಿಗೆ ಬಿಸ್ಕೆಟ್ ನೀಡುವ ವೇಳೆ ತಿನ್ನದೇ ಇದ್ದಾಗ ಪಕ್ಕದಲ್ಲಿದ್ದ ಕಾರ್ಯಕರ್ತರೊಬ್ಬರಿಗೆ ಈ ಬಿಸ್ಕೆಟ್ ನೀಡಿದ್ದು, ಈ ವಿಡಿಯೊ ಏಳೇಳ್ದೆ ವೈರಲ್ ಆಗಿದೆ .

ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರತಿಕ್ರಿಯೆ ನೀಡಿದ್ದು, ವಿಡಿಯೊದಲ್ಲಿರುವ ವ್ಯಕ್ತಿ ನಿಜವಾಗಿಯೂ ನಾಯಿಯ ಮಾಲೀಕರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಾಯಿ ಹೆದರಿತ್ತು, ನಡುಗುತ್ತಿತ್ತು. ನಾನು ಅದಕ್ಕೆ ತಿನ್ನಿಸಲು ಪ್ರಯತ್ನಿಸಿದಾಗ ಅದು ಹೆದರಿತು. ಹಾಗಾಗಿ ನಾನು ನಾಯಿಯ ಮಾಲೀಕರಿಗೆ ಬಿಸ್ಕೆಟ್‌ಗಳನ್ನು ನೀಡಿದ್ದೇನೆ. ಆಮೇಲೆ ನಾಯಿ ಅವರ ಕೈಯಿಂದ ಬಿಸ್ಕೆಟ್ ತಿಂದಿತು. ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿರುವ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, “ಇಲ್ಲ, ಅವರು ಕಾಂಗ್ರೆಸ್ ಕಾರ್ಯಕರ್ತನಾಗಿರಲಿಲ್ಲ. ಬಿಜೆಪಿಗೆ ನಾಯಿಗಳ ಮೇಲಿನ ವ್ಯಾಮೋಹ ನನಗೆ ಅರ್ಥವಾಗುತ್ತಿಲ್ಲ. ನಾಯಿಗಳು ಅವರಿಗೆ ಹೇಗೆ ಹಾನಿ ಮಾಡಿದೆ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!