Wednesday, August 10, 2022

Latest Posts

ಕಲ್ಲಡ್ಕ ಪರಿಸರದಲ್ಲಿ ಟ್ರಾಫಿಕ್ ಜಾಮ್: ಕಿಲೋ ಮೀಟರ್ ಗಟ್ಟಲೆ ವಾಹನಗಳ ಸಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಪರಿಣಾಮ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ವಾಹನ ಸಂಚಾರಕ್ಕೆ ತಡೆ ಬಿದ್ದಿದೆ. ಶುಕ್ರವಾರ ಕಿಲೋಮೀಟರ್ ಗಟ್ಟಲೆ ವಾಹನಗಳ ಸಾಲು ಕಂಡುಬಂದಿದ್ದು, ಸಂಚಾರ ಸುಗಮಗೊಳಿಸಲು ಪೊಲೀಸರು, ಸ್ಥಳೀಯರು ಭಾರೀ ಸಾಹಸಪಡುತ್ತಿದ್ದಾರೆ.

ಒಂದೆಡೆ ಹೆದ್ದಾರಿ ಕಾಮಗಾರಿ, ಇನ್ನೊಂದೆಡೆ ಜಡಿ ಮಳೆ, ಮತ್ತೊಂದೆ ಟ್ರಾಫಿಕ್ ಜಾಮ್ ಪ್ರಯಾಣಿಕರನ್ನು ಹೈರಾಣಾಗಿಸಿದೆ. ಅಗತ್ಯ ಕೆಲಸಗಳಿಗೆ ತೆರಳುವವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss