ಕರ್ತವ್ಯಕ್ಕೆ ಹೊರಟಾಗ ಟ್ರಾಫಿಕ್​ ಜಾಮ್: ರಿಕ್ಷಾದಿಂದ ಇಳಿದು ಸಮಸ್ಯೆ ಬಗೆಹರಿಸಿದ ಪೊಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ನಲ್ಲಿ ಒಂದು ಅಪರೂಪದ ಕ್ಷಣವನ್ನು ಜನರು ಕಂಡು ಖುಷಿಪಟ್ಟಿದ್ದಾರೆ. ಅಲ್ಲಿನ ಟ್ರಾಫಿಕ್ ಪೋಲೀಸ್ ಒಬ್ಬರು ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು. ಈ ವೇಳೆ ಈ ಪ್ರದೇಶ ತನಗೆ ಸೇರುವುದಲ್ಲ, ಏಕೆ ಸುಮ್ಮನೆ ಸಮಸ್ಯೆ ಬಗೆಹರಿಸುವುದು ಎಂದು ಅಂದುಕೊಳ್ಳದ ರಿಕ್ಷಾದಿಂದ ಇಳಿದು ಟ್ರಾಫಿಕ್​ ಸಮಸ್ಯೆ ಬಗೆಹರಿಸಿದ್ದಾರೆ.

ಈ ಬಗ್ಗೆ ಸುದ್ದಿ ವೈರಲ್​ ಆಗಿದ್ದು, ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಪಟ್ಟ ಪ್ರಯತ್ನಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ಇವರ ಬಗ್ಗೆ ಟ್ವಿಟರ್​ನಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ವ್ಯವಹಾರಗಳ ನಿರ್ದೇಶಕ ಪ್ರಭಾತ್ ಸಿನ್ಹಾ ಶೇರ್​ ಮಾಡಿಕೊಂಡಿದ್ದು, “@MumbaiPolice- ತನ್ನ ಕೆಲಸಕ್ಕೆ ಹೋಗುತ್ತಿರುವಾಗ ಈ ಜವಾಬ್ದಾರಿಯುತ ಪೊಲೀಸ್ ಆಟೋರಿಕ್ಷಾದಿಂದ ಹೊರಬಂದು ಟ್ರಾಫಿಕ್ ಅನ್ನು ನಿರ್ವಹಿಸಿ ಕರ್ತವ್ಯಕ್ಕೆ ಹೊರಟಿದ್ದಾರೆ @MTPHereToHelp ಕೀರ್ತಿ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!