Thursday, December 8, 2022

Latest Posts

ನಾಳೆ ಸಿಲಿಕಾನ್​ ಸಿಟಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಸಂಚಾರ ನಿರ್ಬಂಧ: ಎಲ್ಲೆಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಳೆ (ಅ.16 )ಭಾನುವಾರ ರಾಜಧಾನಿಯ ಬಹುತೇಕ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ನಾಳೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ 61ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್ ಮ್ಯಾರಥಾನ್​ ಆಯೋಜಿಸಲಾಗಿದ್ದು, ಇದರಿಂದ ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 4ರಿಂದ 11 ‌ಗಂಟೆಯವರೆಗೂ ಎಲ್ಲಾ ವಿಧದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಯಾವ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಕಸ್ತೂರಬಾ ರಸ್ತೆಯ ಹಡ್ಸನ್ ಸರ್ಕಲ್ ನಿಂದ ಸಿದ್ಧಲಿಂಗಯ್ಯ ಜಂಕ್ಷನ್​ವರೆಗೆ
ಅಂಬೇಡ್ಕರ್ ರಸ್ತೆಯ ತಿಮ್ಮಯ್ಯ ಸರ್ಕಲ್ ನಿಂದ ಕೆ.ಆರ್.ಸರ್ಕಲ್​ವರೆಗೆ
ರಾಜಭವನ ರಸ್ತೆಯ ಸಿಟಿಓ ಸರ್ಕಲ್ ನಿಂದ ತಿಮ್ಮಯ್ಯ ಜಂಕ್ಷನ್​ವರೆಗೆ
ಕ್ವೀನ್ಸ್ ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ಸಿಟಿಓ ಸರ್ಕಲ್​ವರೆಗೆ
ಎಂ.ಜಿ.ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ವೆಬ್ಸ್ ಜಂಕ್ಷನ್​ವರೆಗೆ
ಸಿದ್ಧಲಿಂಗಯ್ಯ ಜಂಕ್ಷನ್ ನಿಂದ ಕ್ವೀನ್ಸ್ ಸರ್ಕಲ್ ವರೆಗೆ
ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ .
ಬದಲಿ‌ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ‌ ಪೊಲೀಸರ ಸೂಚನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!