June 13, 2026
Saturday, June 13, 2026
spot_img

ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನ ಜೋರ್ಹಾಟ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ AN-32 ಸಾರಿಗೆ ವಿಮಾನ ಶನಿವಾರ ಬೆಳಗ್ಗೆ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದೆ. ಘಟನೆಯ ಬಳಿಕ ವಾಯುನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಲ್ಯಾಂಡಿಂಗ್ ವೇಳೆ ಸಂಭವಿಸಿದ ಅವಘಡ

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನ ನೆಲಕ್ಕಿಳಿಯುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ವಾಯುನೆಲೆಯ ಆವರಣದಲ್ಲೇ ಪತನಗೊಂಡಿದೆ. ಅಪಘಾತದ ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು.

ಇದನ್ನೂ ಓದಿ:

ತನಿಖೆ ಆರಂಭಿಸಿದ ವಾಯುಪಡೆ

ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಯಾವುದೇ ಸಾವು-ನೋವಿನ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಭಾರತೀಯ ವಾಯುಪಡೆ ಘಟನೆ ಕುರಿತು ತನಿಖೆ ಆರಂಭಿಸಿದ್ದು, ಪರಿಸ್ಥಿತಿಯ ಮೌಲ್ಯಮಾಪನದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದೆ.

AN-32 ವಿಮಾನವು ಭಾರತೀಯ ವಾಯುಪಡೆಯ ಪ್ರಮುಖ ಸಾರಿಗೆ ವಿಮಾನಗಳಲ್ಲಿ ಒಂದಾಗಿದ್ದು, ದುರ್ಗಮ ಪ್ರದೇಶಗಳಲ್ಲಿ ಸರಕು ಸಾಗಣೆ ಹಾಗೂ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವು ತಿಂಗಳ ಹಿಂದಷ್ಟೇ ಅಸ್ಸಾಂನಲ್ಲೇ ಸುಖೋಯ್ ಸು-30MKI ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟ ಘಟನೆ ನಡೆದಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !