Thursday, October 6, 2022

Latest Posts

ಜವರಾಯನ ಅಟ್ಟಹಾಸ: ಟಿಫಿನ್ ಬಾಕ್ಸ್ ತೊಳೆಯಲು ಕೆರೆಗೆ ಹೋಗಿದ್ದ ಐವರು ನೀರುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದೇ ಕುಟುಂಬದ ಐವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.  ಐವರು ಬಡಿ ದರ್ಗಾಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಅಲ್ಲಿಯೇ ಊಟ ಮಾಡಿ ಒಬ್ಬರು ಟಿಫಿನ್ ಬಾಕ್ಸ್ ತೊಳೆಯಲು ಕೆರೆ ಬಳಿ ಹೋಗಿದ್ರು. ಆಕಸ್ಮಿಕವಾಗಿ ನೀರಿಗೆ ಬಿದ್ದ ಆತನನ್ನು ರಕ್ಷಿಸುವ ಪ್ರಯತ್ನದಲ್ಲಿ ಮತ್ತೆ ಮೂವರು ನೀರಿಗೆ ಹಾರಿದ್ದಾರೆ. ದುರಾದೃಷ್ಟವಶಾತ್‌ ಎಲ್ಲರೂ ನೀರು ಪಾಲಾಗಿದ್ದಾರೆ.

ಮುಳುಗುತ್ತಿರುವ ಮೂವರು ತಮ್ಮನ್ನು ರಕ್ಷಿಸುವಂತೆ ಕೂಗಾಡಿ, ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಉಳಿದ ಇಬ್ಬರು ಕೂಡ ಕೆರೆಗೆ ಹಾರಿದ್ದಾರೆ. ರಕ್ಷಿಸುವ ಪ್ರಯತ್ನದಲ್ಲಿ ಅವರೂ ನೀರು ಪಾಲಾಗಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ದುಃಖವನ್ನುಂಟು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!