October 5, 2026
Monday, October 5, 2026
spot_img

ಘೋರ ದುರಂತ: ಸ್ಕೂಟರ್ ಸ್ಕಿಡ್ ಆಗಿ ಅಪ್ರಾಪ್ತ ಬಾಲಕ ದಾರುಣ ಸಾ*ವು

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿ: ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಅಪ್ರಾಪ್ತ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಸಮೀಪದ ಹೊಲಮಾಳದಲ್ಲಿ ಭಾನುವಾರ ನಡೆದಿದೆ.

ಉಮ್ಮರ್ ಎಂಬವರ ಪುತ್ರ ನಿಯಾನ್ (16) ಎಂಬಾತನೇ ಸ್ಕೂಟರ್’ನಿಂದ ಬಿದ್ದು ಸಾವನ್ನಪ್ಪಿರುವ ಬಾಲಕ.

ಮನೆಯಿಂದ ಸ್ಕೂಟರ್’ನಲ್ಲಿ ಮದರಸಾಗೆ (ಪಳ್ಳಿಗೆ) ತೆರಳಿದ್ದ ಬಾಲಕ ಮನೆಗೆ ಹಿಂತಿರುಗುತ್ತಿದ್ದ ವೇಳೆ  ಈ ಘಟನೆ ನಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ;

ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read