ಹೊಸದಿಗಂತ ವರದಿ ರಾಯಚೂರು:
ಸಾಲ ಬಾಧೆಯನ್ನು ತಾಳಲಾರದೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೊಂದು ಪತಿ ಆತ್ಮಹತ್ಯೆ ನಾಡಿಕೊಂಡ ಘಟನೆ ರಾಯಚೂರಿನ ಜಲಾಲನಗರದಲ್ಲಿ ಜರುಗಿದೆ.
ಶನಿವಾರ ರಾತ್ರಿ ಹೆಂಡತಿ ಅರುಣಾ(40), ಶ್ಲೋಕ(10), ಖುಷಿ(4) ಯನ್ನು ಕೊಂದು ಪತಿ ವಿಷ್ಣು ರೆಡ್ಡಿ ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡುವ ಪೂರ್ವದಲ್ಲಿ ವಿಷ್ಣು ರಡ್ಡಿ ಹಿರಿಯ ಮಗನನ್ನು ಮನೆಯ ಕೋಣೆ ಒಂದರಲ್ಲಿ ಕೂಡಿ ಹಾಕಿದ್ದಾನೆ. ಮೂವರನ್ನು ಹತ್ಯೆ ಮಾಡಿದ ನಂತರ ಹಿರಿಯ ಮಗನಿಗೆ ಫೋನ್ ಮಾಡಿ ಮೂವರನ್ನು ಹತ್ಯೆ ಮಾಡಿದ್ದೇನೆ ನಾವು ಸಾಯಲು ಹೊರಟಿದ್ದೇನೆ ತಿಳಿಸಿದ್ದರು ಎಂದು ಹಿರಿಯ ಮಗ ತಿಳಿಸಿದ್ದಾನೆ.
ಈ ಘಟನಾ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ:
ಸದ್ಯ ಮೃತದೇಹಗಳನ್ನ ನಗರದ ರಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.



