ಬಿಹಾರದಲ್ಲಿ ರೈಲು ಅವಘಡ: ಮಗಧ್ ಎಕ್ಸ್​​ಪ್ರೆಸ್ ನ ಬೋಗಿಗಳ ಜೋಡಣೆ ಕಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥ್ ಪುರ್ ನಿಲ್ದಾಣದ ಬಳಿ ಮಗಧ್ ಎಕ್ಸ್​​ಪ್ರೆಸ್ ರೈಲಿನ ಬೋಗಿಗಳ ಜೋಡಣೆ ಕಟ್ ಆಗಿದ್ದು ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.

ಮಗಧ್ ಎಕ್ಸ್‌ಪ್ರೆಸ್ 20802 ನಂಬರಿನ ರೈಲು ದೆಹಲಿಯಿಂದ ಪಾಟ್ನಾಗೆ ತೆರಳುತ್ತಿತ್ತು. ಈ ವೇಳೆ ಟ್ರೈನ್ ಚಲಿಸುತ್ತಿರುವಾಗಲೇ ಎಸಿ ಬೋಗಿ ಹಾಗೂ ಸ್ಲೀಪರ್ ಬೋಗಿ ನಡುವಿನ ಜೋಡೆಣೆ ಕಟ್ ಆದ ಕಾರಣ ಕೆಲ ಸ್ಲೀಪರ್​ ಬೋಗಿಗಳನ್ನ ಬಿಟ್ಟು ಹಾಗೇ ಸ್ವಲ್ಪ ದೂರ ಹೋಗಿದೆ. ಟ್ರೈನ್​​ನಲ್ಲಿ ಸುಮಾರು 1000 ಜನರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವೇಗದಲ್ಲೇ ಬೋಗಿಗಳನ್ನು ಬಿಟ್ಟು ಹೋದರು ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಯಾವುದು ಪ್ರಾಣ ಹಾನಿಯಂತ ಘಟನೆಗಳು ನಡೆದಿಲ್ಲವೆಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಟ್ರೈನ್​ನ​ ಎಸಿ ಬೋಗಿ ಹಾಗೂ ಸ್ಲೀಪರ್ ಬೋಗಿ ನಡುವೆ ಜೋಡಿಸಿದ್ದ ಪ್ರೇಶರ್ ಪೈಪ್​ ಪೋಲಿಂಗ್ ಕಟ್ ಆಗಿದ್ದರಿಂದ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!