ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಸರ್ಕಾರಿ ಬಸ್ವೊಂದು ಹರಿದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆದಿದೆ.
ಸ್ಥಳೀಯ ನಿವಾಸಿ ಸುನೀಲ್ ಬಂಡರಗರ್ (10) ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕ. ಟ್ಯೂಷನ್ ಮುಗಿಸಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಭೀಕರ ರಸ್ತೆ ಅಪಘಾತ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುನೀಲ್ ಬಂಡರಗರ್ ಎಂಬ ಬಾಲಕ ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಿದ್ದ. ಈ ವೇಳೆ ರಸ್ತೆ ದಾಟಲು ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ. ಇದೇ ಸಮಯಕ್ಕೆ ಅಥಣಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಬಾಲಕನ ಮೇಲೆ ಹರಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.