ಮಧ್ಯಪ್ರದೇಶದ ಬಾಲಾಘಾಟ್’ನಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‍ ‘ಗಳು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಕಿರ್ನಾಪುರಿನ ಭಕುಟೋಲಾ ಅರಣ್ಯದಲ್ಲಿ ತರಬೇತಿ ವಿಮಾನ ಅಪಘಾತಕ್ಕೀಡಾಗಿದ್ದು,ಇಬ್ಬರು ಪೈಲಟ್‍ಗಳು ಸಾವನ್ನಪ್ಪಿದ್ದಾರೆ.

ವಿಮಾನದಲ್ಲಿ ಟ್ರೈನಿ ಪೈಲಟ್ ಸೇರಿದಂತೆ ಇಬ್ಬರು ಪ್ರಯಾಣಿಸುತ್ತಿದ್ದರು.

ಮಹಾರಾಷ್ಟ್ರ ಗೊಂಡಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ತರಬೇತಿ ವಿಮಾನವು ಬಾಲಘಾಟ್‌ನ ಲಾಂಜಿ ಮತ್ತು ಕಿರ್ನಾಪುರ ನಡುವಿನ ಭಕ್ಕುಟೋಲಾ-ಕೋಸ್ಮಾರಾ ಬೆಟ್ಟದ ಮೇಲೆ ಪತನಗೊಂಡಿದೆ. ಅನುಭವಿ ಪುರುಷ ಪೈಲೆಟ್ ಹಾಗೂ ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲೆಟ್ ಈ ವಿಮಾನದಲ್ಲಿದ್ದರು. ಬುಕ್ಕುಟೋಲಾದಲ್ಲಿರುವ ದಟ್ಟ ಕಾಡಿನ ನಡುವೆ ವಿಮಾನ ಅಪಘಾತಗೊಂಡಿದೆ.
ಘಟನಾ ಸ್ಥಳ ಕಿರನಪುರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಲಿದೆ. ವಿಮಾನ ಪತನದ ಸದ್ದುಕೇಳಿಸುತ್ತಿದ್ದಂತೆ ಕಾಡಂಚಿನಲ್ಲಿದ್ದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತನದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು. ಆದರೆ, ವಿಮಾನಕ್ಕೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!