Thursday, March 30, 2023

Latest Posts

SHOCKING | ದೇಶದಲ್ಲಿ ಹೊಸ ಕೋವಿಡ್ ರೂಪಾಂತರ XBB 1.16 ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮತ್ತೊಂದು ಹೊಸ ರೂಪಾಂತರ XBB ​​1.16 ನ 76 ಮಾದರಿಗಳು ಪತ್ತೆಯಾಗಿವೆ.

ಕರ್ನಾಟಕದಾದ್ಯಂತ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2 ಗುಜರಾತ್, ಹಿಮಾಚಾಲ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಮಾದರಿಗಳು ಕಂಡುಬಂದಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.

ಜನವರಿಯಲ್ಲಿ ಮೊದಲ ಬಾರಿಗೆ ಎರಡು ಮಾದರಿಗಳ ಪರೀಕ್ಷೆ ನಡೆಸಿದಾಗ XBB 1.16 ರೂಪಾಂತರ ದೃಢಪಟ್ಟಿತ್ತು. ಫೆಬ್ರವರಿಯಲ್ಲಿ ಒಟ್ಟು 59 ಮಾದರಿಗಳು ಪತ್ತೆಯಾದರೆ, ಮಾರ್ಚ್ ನಲ್ಲಿ ಇಲ್ಲಿಯವರೆಗೂ 5 ಮಾದರಿಗಳು ಪತ್ತೆಯಾಗಿವೆ ಎಂದು INSACOG ಹೇಳಿದೆ.

ದರಿಂದಲೇ ಕೋವಿಡ್-19 ಪ್ರಕರಣಗಳು ಹೆಚ್ಚಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. H3N2 ಕಾರಣ ಇನ್ಫ್ಲುಯೆನ್ಸ ಪ್ರಕರಣಗಳು ಹೆಚ್ಚಾದರೆ, XBB 1.16 ರೂಪಾಂತರದ ಪ್ರಭಾವದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಅಮೆರಿಕ, ಬ್ರೂನಿ, ಸಿಂಗಾಪುರ ಮತ್ತು ಯುಕೆ ನಂತರ ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕನಿಷ್ಠ 12 ದೇಶಗಳಲ್ಲಿ ಹೊಸ ರೂಪಾಂತರ XBB 1.16 ಪತ್ತೆಯಾಗಿದೆ. ಭಾರತದಲ್ಲಿ ಪ್ರಕರಣಗಳಲ್ಲಿ ಶೇ.2.81 ರಷ್ಟು ಹೆಚ್ಚಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!