ಹೊಸದಿಗಂತ ವರದಿ, ಭಟ್ಕಳ:
ದಾಖಲೆ ಇಲ್ಲದೇ ಲಕ್ಷಾಂತರ ಮೌಲ್ಯದ ಅಕ್ರಮ ಹಣವನ್ನು ಕಾರಿನಲ್ಲಿ ಸಾಗಿಸುವ ವೇಳೆ ತಾಲೂಕಿನ ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ ಬಳಿ ತಪಾಸಣೆ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರದಂದು ವರದಿಯಾಗಿದೆ.
ಯಶ್ವಂತ ಸುಕ್ರ ಗೊಂಡ ಕಟಗಾರಕೊಪ್ಪ ಭಟ್ಕಳ, ಶ್ರೀನಿವಾಸ ನಾರಾಯಣ ಗೌಡ ಗುಣವಂತೆ ಹೊನ್ನಾವರ, ರಘು ಅನಂತ ನಾಯ್ಕ ಈ ಮೂವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡವರು ಎಂದು ತಿಳಿದು ಬಂದಿದೆ.
ಶುಕ್ರವಾರದಂದು ನಗರ ಠಾಣೆಯ ಪಿಎಸ್ಐ ಸಂತೋಷ ಹಾಗೂ ಸಿಬ್ಬಂದಿಗಳು ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ನಿಂತ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಭಟ್ಕಳ ಕಡೆಗೆ ಇಕೋ ಕಾರನಲ್ಲಿ ರೂ. 14,90,125 ಲಕ್ಷ ಮೊತ್ತದ ಯಾವುದೇ ದಾಖಲೆ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ತಪಾಸಣೆಯ ಮಾಡಿದಾಗ ಮೂವರು ಆರೋಪಿಗಳು ಹಣವನ್ನು
ಮುರುುಡೇಶ್ವರದ ಕಡೆಗೆ ಸಾಗಿಸುತ್ತಿರುವುದಾಗಿ ಪೋಲಿಸರಲ್ಲಿ ತಿಳಿಸಿದ್ದಾರೆ.
ಮೂವರು ಆರೋಪಿಗಳೊಂದಿಗೆ, ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಪಿಎಸ್ಐ ಯಲ್ಲಪ್ಪ ತನಿಖೆ ಕೈಗೊಂಡಿದ್ದಾರೆ.