ಸಾಗುವಾನಿ ಕಟ್ಟಿಗೆ ಸಾಗಾಟ: ಲಾರಿ ಚಾಲಕ ವಶಕ್ಕೆ

ಹೊಸದಿಗಂತ ವರದಿ ಮುಂಡಗೋಡ:

ಹುಬ್ಬಳ್ಳಿಕಡೆಯಿಂದ ಮುಂಡಗೋಡ ಕಡೆಗೆ ಪರವಾನಿಗೆಗಿಂತ ಹೆಚ್ಚು ಸಾಗುವಾನಿ ಕಟ್ಟಿಗೆ(ಫೋಲ್ಸ್) ಸಾಗಿಸುತ್ತಿರುವ ಲಾರಿಯನ್ನು ವಡಗಟ್ಟ ತನಿಖಾ ಠಾಣೆಯ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಪಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಿಂದ ಶಿರಸಿ ಮಾರ್ಗವಾಗಿ ತಾಲೂಕಿನ ಪಾಳಾ ಗ್ರಾಮಕ್ಕೆ ಲಾರಿಯಲ್ಲಿ ಪರವಾನಿಗೆಗಿಂತ ಅಧಿಕ ಸಾಗುವಾನಿ (ಪೋಲ್ಸ್) ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳ ತಂಡವು ತಾಲೂಕಿನ ವಡಗಟ್ಟ ಚೆಕ್ ಪೋಸ್ಟ್ ಬಳಿ ಲಾರಿ ತಡೆದು ತಪಾಸಣೆ ನಡೆಸಿದಾಗ ೧೩೦ ಸಾಗುವಾನಿ ಫೋಲ್ಸ್ ಸಾಗಾಟ ಮಾಡುತ್ತಿರುವುದು ಕಂಡು ಬಂದಿತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಟ್ಟಿಗೆ ಸಮೇತ ಲಾರಿ ಹಾಗೂ ಲಾರಿ ಚಾಲಕ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಚಂದ್ರು ಲಿಂಬಣ್ಣ ಲಮಾಣಿ ಎಂಬವನ್ನು ವಶಕ್ಕೆ ಪಡೆಯದಲ್ಲದೆ ಲಾರಿಯನ್ನು ಸಹ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಯಲ್ಲಾಪುರದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಎಸ್.ಜಿ.ಹೆಗಡೆ, ಎಸಿಎಫ್. ರವಿ ಹುಲಕೋಟಿ, ವಲಯ ಅರಣ್ಯಾಧಿಕಾರಿ.ವಾಗೇಶ್ ಬಿ ಜೆ, ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ವರ್ಣೆಕರ, ಅರುಣಕುಮಾರ ಕಾಶಿ, ಫಕ್ಕಿರೇಶ ಸುಣಗಾರ, ಗಸ್ತು ಅರಣ್ಯ ಪಾಲಕ ಮರ್ದಾನಲಿ ಕಳಸ,ಸಿಬ್ಬಂದಿ ಪ್ರಕಾಶ ಮೊಸಳಗಿ ಇತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!