Thursday, March 30, 2023

Latest Posts

ಶ್ರೀಗಂಧದ ತುಂಡುಗಳ ಸಾಗಾಟ: ವಾಹನ ಸಹಿತ ಮಾಲು ವಶ

ಹೊಸದಿಗಂತ ವರದಿ ಮಡಿಕೇರಿ:

ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಉಪವಲಯ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಮೇಕೇರಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಕಾರು ಸಹಿತ ಸುಮಾರು 3 ಲಕ್ಷ ರೂ.ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬoಧಿಸಿದಂತೆ ಅರುವತ್ತೊಕ್ಲು ಗ್ರಾಮದ ಆರೋಪಿ ಗಿರೀಶ್ ಎಂಬಾತ ತಲೆ ಮರೆಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ ಉಪ ವಿಭಾಗದ ಡಿಸಿಎಫ್ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಮೊಹ್ಸಿನ್ ಬಾಷಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಗಳಾದ ಬಾಬು ರಾಥೋಡ್, ಮಲ್ಲಯ್ಯ ಹಿರೇಮಠ, ಗಸ್ತು ಅರಣ್ಯ ಪಾಲಕರಾದ ಭವ್ಯಾ, ಯತೀಶ್ ಅರಣ್ಯ ವೀಕ್ಷಕ ವಾಸುದೇವ, ವಾಹನ ಚಾಲಕರಾದ ಸಂಜು, ಮೋಹನ್, ಕುಶ ಮತ್ತಿತರ ಅರಣ್ಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!