ಮೇಘಾ, ಬೆಂಗಳೂರು
ಇನ್ನೊಂದು ವರ್ಷ ಕಳೆದು ಹೊಸ ವರ್ಷದ ಹೊಸ್ತಿಲಲ್ಲಿದ್ದೇವೆ. ಈ ಬಾರಿ ನೀವು ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದರೆ, ಮುಂದಿನ ವರ್ಷ ಟ್ರಾವೆಲ್ ಪ್ಲ್ಯಾನ್ ಮಾಡ್ತಿದ್ರೆ ಮಿಸ್ ಮಾಡ್ದೆ ಈ ಸ್ಥಳಗಳಿಗೆ ಭೇಟಿ ನೀಡಿ.
ಈ ಬಾರಿ ಹೊಸ ವರ್ಷವನ್ನು ವಿಭಿನ್ನವಾಗಿ ಪ್ರಾರಂಭಿಸಲು ಲಕ್ಷದ್ವೀಪಗಳಿಗೆ ಭೇಟಿ ನೀಡಿ. ಇದು ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.
ಜೈಸಲ್ಮೇರ್ ಪ್ರವಾಸ ಮಾಡುವುದು ನಿಜಕ್ಕೂ ಅದ್ಭುತ ಅನುಭವ. ಜೈಸಲ್ಮೇರ್‌ನ ವರ್ಣರಂಜಿತ ಬೀದಿಗಳು ಮತ್ತು ಬೆರಗುಗೊಳಿಸುವ ಮರಳು ದಿಬ್ಬಗಳು ಅದ್ಭುತವಾದ ನೆನಪುಗಳನ್ನು ಸೃಷ್ಟಿಸುತ್ತವೆ.
ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಕಾಡುಗಳಲ್ಲಿ ಒಂದು ಸುತ್ತು ಹಾಕಿ, ಎಲ್ಲಾ ಒತ್ತಡವನ್ನು ದೂರ ಮಾಡುತ್ತದೆ. ಇಲ್ಲಿನ ಪ್ರಾಣಿಗಳನ್ನು ನೋಡುವುದೂ ಒಂದು ಉತ್ತಮ ಅನುಭವವನ್ನು ನೀಡುತ್ತದೆ.
ಬೇಸಿಗೆಯಲ್ಲಿ, ಲಡಾಖ್, ಹಿಮಾಲಯ ಪರ್ವತಗಳು, ಶೀತ ಮರುಭೂಮಿಗಳು, ಎತ್ತರದ ಸರೋವರಗಳು ಮತ್ತು ಆಸಕ್ತಿದಾಯಕ ವನ್ಯಜೀವಿಗಳನ್ನು ಹೊರತುಪಡಿಸಿ ಭೇಟಿ ನೀಡಲು ಬೇರೆ ಬೆಸ್ಟ್ ಸ್ಥಳವಿಲ್ಲ.
ನೀವು ಸ್ಪಿತಿ ಕಣಿವೆಗೆ ಹೋದರೆ, ಸಿಗೋ ಸಂತೋಷನೇ ಬೇರೆ. ಹಿಮಾಲಯದ ಕಣಿವೆಗಳು, ಸಂಸ್ಕೃತಿ, ಆಹಾರ, ಆಚರಣೆಗಳು, ಎಲ್ಲವೂ ಇಲ್ಲಿವೆ.
ಶಿಲ್ಲಾಂಗ್‌ನಲ್ಲಿ ಕ್ರಿಸ್‌ಮಸ್ ಆಚರಣೆಗಳು ನೋಡಲು ಆನಂದದಾಯಕವಾಗಿರುತ್ತದೆ. ಈ ಸ್ಥಳವು ಎಲ್ಲರಿಗೂ ಸಂತೋಷವನ್ನು ನೀಡುತ್ತದೆ. ಮಾರುಕಟ್ಟೆಗಳು, ಕೆಫೆಗಳು ಮತ್ತು ಎಲ್ಲವೂ ಆಕರ್ಷಕವಾಗಿವೆ.
ಅದಕ್ಕೆ ಅಲ್ವಾ ದೊಡ್ಡವರು ಹೇಳೋದು.. ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತ. ಇರೋದೊಂದೇ ಲೈಫ್ ಬರಿ ಕೆಲಸ, ಒತ್ತಡ, ಟೆನ್ಶನ್ ಇವೆಲ್ಲಾ ಕಾಮನ್, ಆದ್ರೆ ಒಮ್ಮೆಯಾದ್ರೂ ನಮ್ಮ ನೆಮ್ಮದಿಗೋಸ್ಕರ ಆದ್ರೂ ನಮ್ಮ ಮನಸ್ಸಿನ ಜೊತೆ ನಾವು ಸ್ವಲ್ಪ ಸಮಯ ಕಳೆಯುವುದು ಉತ್ತಮ ಅಲ್ವಾ.. ಪ್ರಕೃತಿ ಮಡಿಲಲ್ಲಿ ಎಲ್ಲರೂ ಸಮಾನರೇ, ಒಮ್ಮೆ ಅದರ ಆನಂದ ಸವಿದರೆ ಮತ್ತೊಮ್ಮೆ ಬೇಕೆನಿಸುವ ಹಿತ ನೀಡೋ ಶಕ್ತಿ ಇರೋದು ಪ್ರಕೃತಿಗೆ ಮಾತ್ರ..!