May 2, 2026
Saturday, May 2, 2026
spot_img

TRAVEL | ಟ್ರಾವೆಲ್‌ಗೆ ರೆಡಿಯಾಗಿದ್ದೀರಾ? ಬ್ಯಾಗ್‌ನಲ್ಲಿ ಈ ಐಟಮ್ಸ್‌ ಇರಲೇಬೇಕು


ಪ್ರವಾಸವೆಂದರೆ ಎಲ್ಲರಿಗೂ ಸಂತೋಷದ ವಿಷಯ. ಹಾಗೆಯೆ, ಪ್ರವಾಸಕ್ಕೆ ಹೊರಡುವ ಮುನ್ನ ಬ್ಯಾಗ್‌ ಪ್ಯಾಕಿಂಗ್ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ, ಆ ಉತ್ಸಾಹದಲ್ಲಿಯೇ ಕೆಲವು ಅಗತ್ಯ ವಸ್ತುಗಳನ್ನು ಮರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆರಾಮದಾಯಕ ಪ್ರಯಾಣಕ್ಕಾಗಿ ನೀವು ಮರೆಯದೇ ಪ್ಯಾಕ್ ಮಾಡಬೇಕಾದ 9 ಪ್ರಮುಖ ವಸ್ತುಗಳು ಯಾವುವು ಗೊತ್ತಾ? ಇಲ್ಲಿದೆ ಅವುಗಳ ಪಟ್ಟಿ

  1. ಅಡಾಪ್ಟರ್: ವಿವಿಧ ದೇಶಗಳಲ್ಲಿ ಬೇರೆ ಬೇರೆ ರೀತಿಯ ಪ್ಲಗ್‌ ಪಾಯಿಂಟ್‌ಗಳಿರುತ್ತವೆ. ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಯೂನಿವರ್ಸಲ್ ಅಡಾಪ್ಟರ್‌ಗಳನ್ನು ತೆಗೆದುಕೊಂಡು ಹೋಗುವುದು ಅತ್ಯಗತ್ಯವಾಗಿರುತ್ತದೆ.
  2. ಫೋನ್ ಚಾರ್ಜರ್: ಇದು ಸಾಮಾನ್ಯವೆನಿಸಿದರೂ, ಅನೇಕರು ಮನೆಯಲ್ಲಿ ಸ್ವಿಚ್ ಬೋರ್ಡ್‌ಗೆ ಸಿಕ್ಕಿಸಿದ ಚಾರ್ಜರ್ ಅನ್ನು ಅಲ್ಲೇ ಮರೆತು ಬರುತ್ತಾರೆ. ಫೋನ್ ಇಲ್ಲದೆ ಹೋದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  3. ನಗದು: ಡಿಜಿಟಲ್ ಪಾವತಿ ಎಲ್ಲೆಡೆ ಇದ್ದರೂ, ಕೆಲವು ದೂರದ ಪ್ರದೇಶಗಳಲ್ಲಿ ಅಥವಾ ಸಣ್ಣ ಅಂಗಡಿಗಳಲ್ಲಿ ನಗದು ಬೇಕಾಗುತ್ತದೆ. ಹಾಗಾಗಿ ಹಣವನ್ನು ಜೊತೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದು.
  4. ಪೋರ್ಟಬಲ್ ಟೂತ್‌ಬ್ರಷ್: ದೀರ್ಘ ಪ್ರಯಾಣ ಅಥವಾ ವಿಮಾನ ನಿಲ್ದಾಣಗಳಲ್ಲಿ ಕಾಯುವಾಗ ಫ್ರೆಶ್ ಆಗಿರಲು ಇದು ಸಹಕಾರಿಯಾಗುತ್ತದೆ.
  5. ಸನ್‌ಸ್ಕ್ರೀನ್: ಮೋಡ ಕವಿದ ವಾತಾವರಣವಿದ್ದರೂ ಸೂರ್ಯನ ಕಿರಣಗಳು ಚರ್ಮದ ಮೇಲೆ ಪ್ರಭಾವ ಬೀರಬಹುದು. ಚರ್ಮದ ರಕ್ಷಣೆಗಾಗಿ ಸನ್‌ಸ್ಕ್ರೀನ್ ಮರೆಯಬಾರದು.
  6. ಹವಾಮಾನಕ್ಕೆ ತಕ್ಕ ಬಟ್ಟೆಗಳು: ಹೋಗುವ ಜಾಗದ ಹವಾಮಾನ ಹೇಗಿದೆ ಎಂದು ತಿಳಿದು ಅದಕ್ಕೆ ತಕ್ಕಂತೆ ಬಟ್ಟೆಗಳನ್ನು ಪ್ಯಾಕ್ ಮಾಡುವುದು ಒಳ್ಳೆಯದು. ಬೇರೆ ಬಟ್ಟೆಗಳನ್ನು ಕೊಂಡೊಯ್ದರೆ ಪ್ರಯಾಣದ ಉತ್ಸಾಹವೇ ಹಾಳಾಗಬಹುದು.
  7. ಪೆನ್ : ವಿಮಾನ ನಿಲ್ದಾಣಗಳಲ್ಲಿ ಫಾರ್ಮ್‌ಗಳನ್ನು ತುಂಬಲು ಅಥವಾ ಇನ್ಯಾವುದೇ ತುರ್ತು ಕೆಲಸಕ್ಕೆ ಪೆನ್ ಅಗತ್ಯವಿರುತ್ತದೆ. ಪ್ರತಿ ಬಾರಿ ಬೇರೆಯವರನ್ನು ಕೇಳುವುದು ಸಮಂಜಸವಲ್ಲ.
  8. ಹೆಚ್ಚುವರಿ ಪ್ಲಾಸ್ಟಿಕ್ ಚೀಲಗಳು: ಒದ್ದೆಯಾದ ಬಟ್ಟೆಗಳನ್ನು ಇಡಲು ಅಥವಾ ಶೂಗಳನ್ನು ಪ್ರತ್ಯೇಕವಾಗಿರಿಸಲು ಪ್ಲಾಸ್ಟಿಕ್‌ ಚೀಲಗಳು ಬಹಳ ಉಪಯುಕ್ತ.
  9. ಸಾಮಾನ್ಯ ಔಷಧಿಗಳು: ತಲೆನೋವು, ಮೈಕೈ ನೋವು ಅಥವಾ ಅಲರ್ಜಿಯಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಅಗತ್ಯವಿರುವ ಮಾತ್ರೆಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !