ವಿವಿಧತೆಯಲ್ಲೇ ಏಕತೆ ಅನ್ನೋ ನಮ್ಮ ಭಾತದಲ್ಲಿ ನೋಡಬೇಕಾಗಿರೋ ಅದೆಷ್ಟೋ ಊರು, ಪಟ್ಟಣ, ಹಳ್ಳಿಗಳಿವೆ. ನಮ್ಮ ದೇಶದ ಬೀದಿಗಳು ಚೈತನ್ಯದಿಂದ ಕೂಡಿರುವುದರ ಜೊತೆಗೆ ಕಲಾತ್ಮಕ ಸೌಂದರ್ಯವನ್ನು ಸಾಕಾರಗೊಳಿಸುತ್ತವೆ. ಗಿಜಿಗುಡುವ ಗಲ್ಲಿಗಳಿಂದ ಹಿಡಿದು ದೊಡ್ಡ ಅರಮನೆಗಳು, ಕೆಲಿಡೋಸ್ಕೋಪಿಕ್ ಮೆಟ್ಟಿಲು ಬಾವಿಗಳವರೆಗೆ, ಪ್ರತಿಯೊಂದು ವಿಷಯದಲ್ಲಿ ಭಾರತವು ಎಂದಿಗೂ ಯಾರನ್ನು ನಿರಾಶೆಗೊಳಿಸಿಲ್ಲ. ಅದರಂತೆ, ನೀವು ನಿಮ್ಮ ಜೀವನದಲ್ಲಿ ಒಂದು ಸಲವಾದ್ರೂ ನಮ್ಮ ದೇಶದ ಈ ಜಾಗಗಳನ್ನ ನೋಡ್ಲೇಬೇಕು. ಅದು ಯಾವುದು ಅಂತೀರಾ? ಇಲ್ಲಿದೆ ನೋಡಿ.
ಪಿಂಕ್ ಸಿಟಿ :ಜೈಪುರ್
1876ರಲ್ಲಿ ವೇಲ್ಸ್ ರಾಜಕುಮಾರನ ಸ್ವಾಗತಕ್ಕಾಗಿ ಜೈಪುರ ನಗರಕ್ಕೆ ಗುಲಾಬಿ-ಪೀಚ್ ಟೋನ್‌ನಲ್ಲಿ ಬಣ್ಣ ಬಳಿಯಲಾಗಿತ್ತು, ಮತ್ತು ಆ ಬಣ್ಣ ಇಂದಿಗೂ ಉಳಿದಿದೆ. ಅದಕ್ಕಾಗಿಯೇ ಜೈಪುರವನ್ನು ಪಿಂಕ್ ಸಿಟಿ ಎಂದು ಕರೆಯುತ್ತಾರೆ. ಹವಾ ಮಹಲ್ (ಪ್ಯಾಲೇಸ್ ಆಫ್ ವಿಂಡ್ಸ್), ಸಿಟಿ ಪ್ಯಾಲೇಸ್, ಮತ್ತು ಶತಮಾನಗಳಷ್ಟು ಹಳೆಯದಾದ ಬಜಾರ್‌ಗಳು ಜವಳಿ, ಆಭರಣಗಳು, ಮತ್ತು ಪ್ರಾಚೀನ ವಸ್ತುಗಳಿಂದ ಜೈಪುರ್ ತುಂಬಿವೆ.
ದಿ ಬ್ಲೂ ಸಿಟಿ:ಜೋಧ್‌ಪುರ್
ರಾಜಸ್ಥಾನದ ಥಾರ್ ಮರುಭೂಮಿಯ ಅಂಚಿನಲ್ಲಿರುವ ಜೋಧ್‌ಪುರವು ಹಳೆಯ ಪಟ್ಟಣದ ಚಿಕ್ಕ-ನೀಲಿ ಮನೆಗಳ ಸಮುಚ್ಛಯಕ್ಕೆ ಹೆಸರುವಾಸಿಯಾಗಿದೆ. ಈ ಮನೆಗಳನ್ನು ತಂಪಾಗಿರಿಸಲು ಮತ್ತು ಕೀಟಗಳನ್ನು ದೂರವಿಡಲು ಬಣ್ಣ ಬಳಿಯಲಾಗಿತ್ತು.
ಫ್ರೆಂಚ್ ರಿವೇರಿಯಾ: ಪುದುಚೇರಿ
ಫ್ರೆಂಚ್ ಕ್ವಾರ್ಟರ್‌ನಲ್ಲಿ ಮಸ್ಟರ್ಡ್-ಹಳದಿ ವಿಲ್ಲಾಗಳು, ಬೇಬಿ-ಬ್ಲೂ ಶಟರ್‌ಗಳು, ಮತ್ತು ನೀಲಿಬಣ್ಣದ ಗೋಡೆಗಳ ಮೇಲೆ ತೆವಳುವ ಬೌಗೆನ್ವಿಲ್ಲಾಗಳನ್ನು ಕಾಣಬಹುದು.
ಗೋಲ್ಡನ್ ಸಿಟಿ: ಅಮೃತಸರ
ಅಮೃತಸರವು ಗೋಲ್ಡನ್ ಟೆಂಪಲ್‌ಗೆ ಹೆಸರುವಾಸಿಯಾಗಿದೆ. ಈ ಪಟ್ಟಣವು ಸಾಂಪ್ರದಾಯಿಕ ಫುಲ್ಕರಿ ಕಸೂತಿಯಿಂದ ಹಿಡಿದು ಸ್ಥಳೀಯರು ಧರಿಸುವ ಪ್ರಕಾಶಮಾನವಾದ ಪೇಟ ಮತ್ತು ಸೀರೆಗಳು ಸಿಗುವ ಅತ್ಯಂತ ಆಕರ್ಷಕ ನಗರವಾಗಿದೆ.
ಕಲರ್‌ಫುಲ್ ಸಿಟಿ: ವಾರಣಾಸಿ
ವಿಶ್ವದ ಹಳೆಯ ನಗರಗಳಲ್ಲಿ ಒಂದಾದ ವಾರಣಾಸಿಯು ಅತ್ಯಂತ ಸುಂದರವಾಗಿದೆ. ಗಂಗಾ ನದಿಯ ತೀರದ ಘಾಟ್‌ಗಳು, ವಿಶೇಷವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮನುಷ್ಯನ ಆಧ್ಯಾತ್ಮಿಕ ಜೀವನದ ಮೌಲ್ಯಗಳನ್ನು ಜೀವಂತವಾಗಿಸುತ್ತವೆ.