ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಈ ಹಿನ್ನೆಲೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಆರ್ ಟಿ ಪಿ ಸಿ ಆರ್ ವರದಿಯ ಅಗತ್ಯವಿಲ್ಲ ಆದರೆ ಲಸಿಕೆ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಈ ಕುರಿತು ಟ್ವಿಟರ್ ಮೂಲಕ ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ, ಎಲ್ಲಾ ರೀತಿಯ ಸಾರಿಗೆ ವಿಧಾನಗಳ ಮೂಲಕ ( ಬಸ್ಸು, ವಿಮಾನ, ರೈಲು, ಖಾಸಗಿ ವಾಹನ) ಬರುವವರಿಗೆ ಆರ್ ಟಿಪಿಸಿಆರ್ ವರದಿಯ ಅಗತ್ಯವಿಲ್ಲ.
ಆದರೆ ಕೊರೊನಾ ಲಸಿಕೆ ಪಡೆದ ಪ್ರಮಾಣಪತ್ರ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
Passengers coming from Maharashtra to Karnataka, through all modes of transportation, no longer need a negative RTPCR report. Vaccine certificate is however mandatory.#Maharashtra #Covid_19 #Covid pic.twitter.com/p84o2fGCB5
— Dr Sudhakar K (@mla_sudhakar) February 11, 2022